ಸಿದ್ದಗಂಗಾ ಮಠದ ಯಾವುದೇ ವಿದ್ಯಾರ್ಥಿಗೆ ಕೊರೋನಾ ಇಲ್ಲ: ಸ್ವಾಮೀಜಿ ಸ್ಪಷ್ಟನೆ

1 min read

ತುಮಕೂರು, ಜೂ.20 tumkurnews.in
ಸಿದ್ಧಗಂಗಾ ಮಠದ ಯಾವುದೇ ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು ಇಲ್ಲ ಎಂದು ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮಿಗಳು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಶನಿವಾರ ಸ್ಪಷ್ಟೀಕರಣ ನೀಡಿರುವ ಅವರು, ಆಂಧ್ರಪ್ರದೇಶದಿಂದ ಬಂದಿದ್ದ ವಿದ್ಯಾರ್ಥಿ ಓರ್ವನಲ್ಲಿ ಸೋಂಕು ಇರುವ ಶಂಕೆಯಿಂದ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ವರದಿ ನೆಗೆಟಿವ್ ಬಂದಿದ್ದು, ವಿದ್ಯಾರ್ಥಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆ ವಿದ್ಯಾರ್ಥಿ ಜೊತೆಗಿದ್ದ 120 ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಮೂವರು ಮಕ್ಕಳು ಕ್ವಾರಂಟೈನ್ ನಿಂದ ಇನ್ನೊಂದು ದಿನದಲ್ಲಿ ಬಿಡುಗಡೆ ಆಗಲಿದ್ದಾರೆ. ಮಠದ ಯಾವುದೇ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
Tumkurnews.in

About The Author

You May Also Like

More From Author

+ There are no comments

Add yours