ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ 19 ಪ್ರಕರಣ, ರಾಜ್ಯದಲ್ಲಿ 10 ಸಾವಿರದ ಸಮೀಪ

1 min read

ತುಮಕೂರು, (ಜೂ.22) tumkurnews.in

ಜಿಲ್ಲೆಯಲ್ಲಿ ಸೋಮವಾರ ಎರಡು ಕೋವಿಡ್ 19 ಸೋಂಕು ಪ್ರಕರಣ ಕಂಡು ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 52 ಜನರಿಗೆ ಸೋಂಕು ತಗಲಿದಂತಾಗಿದೆ.
ರಾಜ್ಯದಲ್ಲಿ ಇಂದು ಒಂದೇ ದಿನ 249 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ. 111 ಜನ ಇವತ್ತು ಗುಣಮುಖರಾಗಿದ್ದಾರೆ.
ಈವರೆಗೆ ರಾಜ್ಯದಲ್ಲಿ 142 ಜನ ಕೋವಿಡ್ ಸೋಂಕು ತಗಲಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಈವರೆಗೆ 9399 ಜನರಿಗೆ ಕೋರಾನ ಸೋಂಕು ತಗಲಿದ್ದು, 5730 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3523 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 10 ಸಾವಿರ ಸಂಖ್ಯೆಯ ಸಮೀಪದಲ್ಲಿ ಇದೆ.

About The Author

You May Also Like

More From Author

+ There are no comments

Add yours