ಗ್ರಾಮ ಪಂಚಾಯತ್ ಕಚೇರಿ ಸ್ಫೋಟಿಸಲು ಯತ್ನ; ಬೆಚ್ಚಿ ಬಿದ್ದ ತುಮಕೂರು ಜಿಲ್ಲೆ; ವಿಡಿಯೋ

1 min read

Tumkurnews
ತುಮಕೂರು; ಸ್ಫೋಟಕಗಳನ್ನು ಬಳಸಿ ಗ್ರಾಮ ಪಂಚಾಯತ್ ಕಚೇರಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಬೂದಿಬೆಟ್ಟ ಗ್ರಾಮ ಪಂಚಾಯತಿ ಕಚೇರಿಯನ್ನು ದುಷ್ಕರ್ಮಿಗಳು ಸ್ಫೋಟಕಗಳನ್ನು ಬಳಸಿ ಸ್ಫೋಟಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಪಂಚಾಯತಿ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.

ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
ಬೂದಿಬೆಟ್ಟ ಗ್ರಾಮ ಪಂಚಾಯತಿ ಕಚೇರಿಯಲ್ಲಿ ರಾತ್ರಿ ಸುಮಾರು 9:30ರ ವೇಳೆಗೆ ಭಾರೀ ಸ್ಪೋಟದ ಸದ್ದು ಕೇಳಿಸಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ನೋಡಿದ್ದು, ಕಿಡಿಗೇಡಿಗಳು ಅದಾಗಲೇ ಸ್ಥಳದಿಂದ ಪರಾರಿಯಾಗಿದ್ದು ಕಂಡು ಬಂದಿದೆ.
ಸ್ಫೋಟದ ತೀವ್ರತೆಗೆ ಪಂಚಾಯತಿ ಕಚೇರಿ ಗೋಡೆಗಳು ಬಿರುಕು ಬಿಟ್ಟಿದೆ.
ದಾಖಲೆಗಾಗಿ ಹುಡುಕಾಟ; ಕಿಡಿಗೇಡಿಗಳು ಯಾವುದೋ ದಾಖಲೆಗಳಿಗಾಗಿ ಪಂಚಾಯತಿ ಕಚೇರಿಗೆ ನುಗ್ಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಿಟಕಿ ಒಡೆದು ಒಳಗೆ ಬಂದಿರುವ ದುಷ್ಕರ್ಮಿಗಳು ಯಾವುದೋ ದಾಖಲೆಗಳನ್ನು ಹುಡುಕಾಡಿದ್ದಾರೆ. ಅದು ಸಿಗದೇ ಇದ್ದಾಗ ಸಂಪೂರ್ಣ ಕಚೇರಿಯನ್ನು ಧ್ವಂಸ ಮಾಡುವ ಯತ್ನ ನಡೆಸಿದ್ದಾರೆ.
ಸ್ಫೋಟದಿಂದಾಗಿ ಕಚೇರಿಯ ಎರಡು ಕುರ್ಚಿಗಳು ಸುಟ್ಟಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಪಾವಗಡದಲ್ಲಿ ಚಿರತೆ ಪ್ರತ್ಯಕ್ಷ; ವಿಡಿಯೋ
ಅಧ್ಯಕ್ಷೆ ಪ್ರತಿಕ್ರಿಯೆ; ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ಆನಂದಪ್ಪ, ಕಳೆದ ರಾತ್ರಿ 9:30ರ ವೇಳೆ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಭಾರೀ ಸದ್ದು ಕೇಳಿ ಬಂದಿದೆ. ಈ ವೇಳೆ ಪಕ್ಕದಲ್ಲೇ ವಾಸವಿರುವ ಕಂಪ್ಯೂಟರ್ ಆಪರೇಟರ್ ಮಹಾಲಿಂಗಪ್ಪ ಗ್ರಾಪಂಗೆ ಆಗಮಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿಸಿದರು.
ಇದು ಕಿಡಿಗೇಡಿಗಳ ಕೃತ್ಯ. ಪಂಚಾಯತ್ ಕಚೇರಿಯ ಕಿಟಕಿ ಒಡೆದು ಒಳಗೆ ನುಗ್ಗಿ ಅದ್ಯಾವುದೋ ದಾಖಲೆಪತ್ರಗಳಿಗೆ ತಡಕಾಡಿದ್ದಾರೆ. ಅದು ಸಿಗದೇ ಇದ್ದಾಗ ಈ ಸ್ಫೋಟ ನಡೆಸಿದ್ದಾರೆ ಎಂದು ಗ್ರಾಪಂ ಪಿಡಿಒ ಮುದ್ದರಾಜು ತಿಳಿಸಿದ್ದಾರೆ.

ಮತದಾರರ ಗುರುತಿನ ಚೀಟಿ ವಿತರಣೆಗೆ ಗ್ರಹಣ; ಕಾರಣ ಕ್ಷುಲ್ಲಕ!
ವೈಎನ್ ಹೊಸಕೋಟೆ ಠಾಣೆಯ ಪಿಎಸ್ಐ ಅರ್ಜುನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಜಿಲ್ಲೆಯ ಜನರು ಬೆಚ್ವಿ ಬಿದ್ದಿದ್ದಾರೆ.

ವರದಿ; ಇಮ್ರಾನ್ ಉಲ್ಲಾ, ಪಾವಗಡ

About The Author

You May Also Like

More From Author

+ There are no comments

Add yours