ಮತದಾರರ ಗುರುತಿನ ಚೀಟಿ ವಿತರಣೆಗೆ ಗ್ರಹಣ; ಕಾರಣ ಕ್ಷುಲ್ಲಕ!

1 min read

Tumkurnews
ತುಮಕೂರು; ಜಿಲ್ಲೆಯಲ್ಲಿ ಹೊಸ ಮತದಾರರ ಚೀಟಿ ವಿತರಣೆ ಕಾರ್ಯ ಕ್ಷುಲ್ಲಕ ಕಾರಣಕ್ಕೆ ಸ್ಥಗಿತಗೊಂಡಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಂಡವರು ಮತದಾರರ ಗುರುತಿನ ಚೀಟಿ ಸಿಗದೆ ಪರದಾಡುವಂತಾಗಿದೆ.
ಕಳೆದ ಫೆಬ್ರವರಿ ತಿಂಗಳಿನಿಂದಲೂ ಮತದಾರರ ಗುರುತಿನ ಚೀತಿ ವಿತರಣೆ ಕಾರ್ಯ ಆಗಿಲ್ಲ! ಹೀಗೇಕೆ? ಎಂದು ವಿಚಾರಿಸಿದಾಗ ಸಿಕ್ಕ ಉತ್ತರ ಕ್ಷುಲ್ಲಕವಾದದ್ದು. ಅಧಿಕಾರಿಗಳ ಬೇಜವಬ್ದಾರಿ, ಉಡಾಫೆತನದಿಂದಾಗಿ ದೇಶದ ಪ್ರತಿಯೊಬ್ಬ ನಾಗರೀಕನ ಹಕ್ಕು ಆಗಿರುವ ಮತದಾರರ ಚೀಟಿಯಿಂದಲೇ ಜನ ವಂಚಿತರಾಗುವಂತಾಗಿದೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಏನದು ಕ್ಷುಲ್ಲಕ ಕಾರಣ?; ಜಿಲ್ಲೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಹೊಸ ಮತದಾರರ ಗುರುತಿನ ಚೀಟಿ ವಿತರಣೆ ಆಗಿಲ್ಲ‌. ಇದಕ್ಕೆ ಕಾರಣ ಚುನಾವಣಾ ‌ಶಾಖೆಯಲ್ಲಿ ಮತದಾರರ ಗುರುತಿನ ಚೀಟಿ ಮುದ್ರಿಸುವ ಪ್ರಿಂಟರ್ ನ ಕಾಟ್ರೇಜ್ ಖಾಲಿ ಆಗಿರುವುದು! ಹೌದು ಕೇವಲ ಕಾಟ್ರೇಜ್ ಖಾಲಿ ಆಗಿದೆ ಎಂಬ ಒಂದೇ ಕಾರಣಕ್ಕೆ ಕಳೆದ ನಾಲ್ಕು ತಿಂಗಳಿನಿಂದ ಮತದಾರರ ಗುರುತಿನ ಚೀಟಿ ವಿತರಣೆ ಕಾರ್ಯವನ್ನು ಚುನಾವಣಾ ಶಾಖೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಈ ಕಾಟ್ರೇಜ್ ಬೆಲೆ ಕೇವಲ 6 ಸಾವಿರ ರೂ.ಗಳಾಗಿದ್ದು, ಚುನಾವಣೆ ಶಾಖೆಯಲ್ಲಿ ಅದಕ್ಕೂ ಹಣ ಇಲ್ಲವೇ ಎಂಬ ಪ್ರಶ್ನೆ ಕಾಡಿದೆ.

ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ
ಪತ್ರ ಬರೆದರೂ ಡೋಂಟ್ ಕೇರ್; ಚುನಾವಣೆ ಶಾಖೆಯ ಬೇಜವ್ದಾರಿಯಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ದಿನ ನಿತ್ಯ ಸ್ಥಳೀಯ ತಾಲ್ಲೂಕು ಕಚೇರಿಗೆ, ಅರ್ಜಿ ಸಲ್ಲಿಸಿದ ಸೇವಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಆದರೆ ಮತದಾರರ ಗುರುತಿನ ಚೀಟಿ ಮಾತ್ರ ಸಿಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯಿಂದ ಎರಡು ಬಾರಿ ಚುನಾವಣೆ ಶಾಖೆಗೆ ಪತ್ರ ಬರೆದು ಬಾಕಿ ಇರುವ ಗುರುತಿನ ಚೀಟಿಗಳನ್ನು ವಿತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಚುನಾವಣೆ ಶಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರು ದೂರವಾಣಿ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂಬ ದೂರುಗಳಿವೆ. ಒಟ್ಟಾರೆಯಾಗಿ ಚುನಾವಣೆ ಶಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತು ಮತದಾರರ ಗುರುತಿನ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್!; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours