ತುಮಕೂರಿನಲ್ಲಿ ಬರ್ತ್ ಡೇ ಆಚರಿಸಿಕೊಂಡ ರೈಲು!

1 min read

Tumkurnews
ತುಮಕೂರು; ಮನುಷ್ಯರು ಹುಟ್ಟು ಹಬ್ಬಗಳನ್ನು ಕೇಕ್ ಕತ್ತರಿಸಿ ಆಚರಿಸುವುದು ಸಹಜ, ಆದಾಗ್ಯೂ ಅಲ್ಲೊಮ್ಮೆ, ಇಲ್ಲೊಮ್ಮೆ ಎಂಬಂತೆ ತಮ್ಮ ಪ್ರೀತಿಯ ಸಾಕುಪ್ರಾಣಿಗಳ ಹುಟ್ಟು ಹಬ್ಬಗಳನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ತುಮಕೂರಿನ ಜನರು ರೈಲೊಂದರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ!
ಹೌದು, ತುಮಕೂರಿನ ರೈಲು ಪ್ರಯಾಣಿಕರು ಪ್ರತಿವರ್ಷ ರೈಲೊಂದರ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅದರಂತೆ ಬುಧವಾರ ಸದರಿ ರೈಲಿನ 9ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಗಿದೆ.

ಕೊನೆಗೂ ಮಾಲೀಕರ ಮನೆ ಸೇರಿದ ಆಫ್ರಿಕನ್ ಗಿಣಿ; ಸಿಕ್ಕ ಬಹುಮಾನವೆಷ್ಟು ಗೊತ್ತೇ?
ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆಯಿಂದ ಇಂದು ತುಮಕೂರು- ಬೆಂಗಳೂರು ರೈಲಿನ ಒಂಭತ್ತನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ರೈಲಿನ ಪೈಲಟ್ ಮತ್ತು ಗಾರ್ಡ್ ಅವರಿಂದ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಈ ಸಂಭ್ರಮದಲ್ಲಿ ರೈಲ್ವೇ ನಿಲ್ದಾಣ ವ್ಯವಸ್ಥಾಪಕರು, ಆರ್.ಪಿ.ಎಫ್ ಇನ್ಸ್‌ಪೆಕ್ಟರ್, ವೇದಿಕೆ ಪದಾಧಿಕಾರಿಗಳು ಹಾಗೂ ಪ್ರಯಾಣಿಕರು ಭಾಗವಹಿಸಿದ್ದರು.
ರೈಲಿಗೆ ಪೂಜೆ; ಸರಳವಾಗಿ ಅಲಂಕೃತ ರೈಲಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ನಂತರ ಕೇಕ್ ಕತ್ತರಿಸಿ, ಪ್ರಯಾಣಿಕರಿಗೆ ವಿತರಿಸಲಾಯಿತು. ರೈಲು ನಿಲ್ದಾಣದಲ್ಲಿ ನೆರೆದಿದ್ದ ಇತರೆ ಪ್ರಯಾಣಿಕರು ರೈಲಿನ ಬರ್ತ್ ಡೇಯನ್ನು ಅಚ್ಚರಿಯಿಂದ ಕಣ್ತುಂಬಿಕೊಂಡರು.

ತುಮಕೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 111 ಬಾಲೆಯರಿಗೆ ಕಂಕಣ ಕಂಟಕ!

About The Author

You May Also Like

More From Author

+ There are no comments

Add yours