KEA ಹುದ್ದೆಗಳಿಗೆ ಅರ್ಜಿ ಆಹ್ವಾನ; 1 ಲಕ್ಷ ವರೆಗೆ ವೇತನ!

1 min read

Tumkur News
ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 5 ಪ್ರೋಗ್ರಾಮರ್ ಹುದ್ದೆಗಳು ಖಾಲಿ ಇವೆ. ಮಾಸಿಕ ರೂ.1,00,000 ವರೆಗೆ ನೀಡಲಾಗುತ್ತಿದ್ದು, ಎಂಸಿಎ / ಎಂ.ಟೆಕ್ (ಸಿಎಸ್/ಐಟಿ) / ಬಿಇ / ಬಿ.ಟೆಕ್ (ಸಿಎಸ್/ಐಟಿ) / ಎಂಎಸ್ಸಿ (ಸಿಎಸ್/ಐಟಿ) ಪಾಸಾಗಿರುವವರು ಅರ್ಜಿ ಸಲ್ಲಿಸಲು ಅರ್ಹರು.

ಇಸಿಐಎಲ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎರಡು ವರ್ಷ DOT NET-C# ಕಾರ್ಯಾನುಭವ ಹೊಂದಿರಬೇಕು. MS SQL Server DB, Web Services, WCF, SSRS, SSIS ಕಾರ್ಯಾನುಭವ ಇದ್ದರೆ ಅನುಕೂಲ. ಇ-ಪೇಮೆಂಟ್ ಗೇಟ್‌ವೇ ಇಂಟಿಗ್ರೇಷನ್, ಎಸ್‌ಎಂಎಸ್ ಮತ್ತು ಇ-ಮೇಲ್ ಗೇಟ್‌ವೇ ಇಂಟಿಗ್ರೇಷನ್, ಮೊಬೈಲ್ ಅಪ್ಲಿಕೇಶನ್ ಕಾಂಪ್ಲಿಯನ್ಸ್‌ ಬಳಕೆ ತಿಳಿದಿರಬೇಕು.

ಆದಾಯ ತೆರಿಗೆ ಇಲಾಖೆಯಲ್ಲಿ ರೂ. 39,100ವರೆಗೆ ವೇತನ ಪಡೆಯುವ ಅವಕಾಶ!

ಕೆಇಎ ಪ್ರಸ್ತುತ ಪ್ರೋಗ್ರಾಮರ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಿದೆ. ಈ ಹುದ್ದೆಗಳ ಅವಧಿ ಪ್ರಾರಂಭದಲ್ಲಿ 1 ವರ್ಷ ಇರುತ್ತದೆ. ನಂತರ ಕಾರ್ಯಕ್ಷಮತೆ ಆಧಾರದಲ್ಲಿ ಹುದ್ದೆಯ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸುವ ಅವಕಾಶ ಇರುತ್ತದೆ.

ಗ್ರಾಮೀಣ ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಸಿಹಿ ಸುದ್ದಿ; 8,106 ಹುದ್ದೆಗಳಿಗೆ‌ ಅರ್ಜಿ‌ ಆಹ್ವಾನ

ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿವರಗಳನ್ನು ಪ್ರಾಧಿಕಾರಕ್ಕೆ ಇ-ಮೇಲ್ keaopportunities@gmail.com ಗೆ ಕಳುಹಿಸಬಹುದು.

About The Author

You May Also Like

More From Author

+ There are no comments

Add yours