ನನ್ನ ಅವಶ್ಯಕತೆ ಅವರಿಗಿಲ್ಲ ಎಂದುಕೊಂಡಿದ್ದೇನೆ; ಎಸ್.ಆರ್. ಶ್ರೀನಿವಾಸ್ ಹೇಳಿಕೆ

1 min read

Tumkur News
ತುಮಕೂರು: ನನ್ನ ಪರ್ಯಾಯವಾಗಿ ನಾಯಕರನ್ನು ಈಗಾಗೇ ಹುಡುಕಿದ್ದಾರೆ. ಹಾಗಾಗಿ ಅವರಿಗೆ ನನ್ನ ಅವಶ್ಯಕತೆ ಇಲ್ಲ. ನಾನು ಜೆಡಿಎಸ್ ಗೆ ಆತ್ಮಸಾಕ್ಷಿಯ ಮತ ಹಾಕಬೇಕು ಅಂದುಕೊಂಡಿದ್ದೇನೆ. ಆದರೆ, 40 ಗಂಟೆಗಳಲ್ಲಿ ಏನುಬೇಕಾದರೂ ಆಗಬಹುದು ಎಂದು ಜೆಡಿಎಸ್ ಅತೃಪ್ತ ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿಕೆ ನೀಡಿದರು.

ಲಾರಿಗಳ‌ ಅಪಘಾತ: ಒಂದು ಲಾರಿ ಭಸ್ಮ

ನಗರದಲ್ಲಿ ಮಾಧ್ಯಮದೊಂದಿಗೆ ರಾಜ್ಯಸಭೆ ಚುನಾವಣೆ ಹಿನ್ನೆಲೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಆತ್ಮಸಾಕ್ಷಿಯ ಮತ ಹಾಕುವಂತೆ ನನಗೆ ಪಕ್ಷದಿಂದ ಕರೆ ಬಂದಿಲ್ಲ. ಕುಪೆಂದ್ರ ರೆಡ್ಡಿ ಮನೆಗೆ ಬಂದು, ಸಹಾಯ ಕೇಳಿದ್ದರು. ನಾನು ಮಾತನಾಡುತ್ತೇನೆ‌ ಎಂದಿದ್ದೆ. ಕುಮಾರಸ್ವಾಮಿ ನನ್ನ ಬಳಿ ಈ ವಿಷಯದ ಕುರಿತು ಪ್ರಸ್ತಾಪ ಮಾಡಿಲ್ಲ. ಅವರು ಮತ ಹಾಕುವಂತೆ ಕೇಳುವುದಿಲ್ಲ ಎಂದುಕೊಂಡಿದ್ದೇನೆ ಎಂದು ಹೇಳಿದರು.

NSUI ಕಾರ್ಯಕರ್ತರಿಗೆ ಬೇಲ್ ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಸಿದ್ದರಾಮಯ್ಯ ಅವರು ವಿಶ್ಲೇಷಣೆ ಮಾಡಿದ ರೀತಿಗೆ ನನ್ನ ಆತ್ಮಸಾಕ್ಷಿ ಮತ ಇಲ್ಲ. ನಾನು ಕುಮಾರಸ್ವಾಮಿ ಹಾಗೂ‌ ನಿಖಿಲ್ ಗೆ ಬೆನ್ನಿಗೆ ಚೂರಿ ಹಾಕಿದ್ದೇನಂತೆ. ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ. ಡಿಸೆಂಬರ್ ವರೆಗೆ ಕಾದು ನೋಡುತ್ತೇನೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 111 ಬಾಲೆಯರಿಗೆ ಕಂಕಣ ಕಂಟಕ!

ನಾನು ರೇಸಾರ್ಟ್ ಗೆ ಹೋಗುವುದಿಲ್ಲ. ಈಗಾಗಲೇ ಪಕ್ಷದಲ್ಲಿ ವಿಪ್ ಜಾರಿ ಮಾಡಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರಿಗೆ  ಶಿಕ್ಷೆ ಏನಾಗಿದೆ ಎಂಬುದು ನೀವೇ ಗಮನಿಸಬಹುದು ಎಂದರು.

About The Author

You May Also Like

More From Author

+ There are no comments

Add yours