ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಮಾದರಿಯಾದ ಸಿದ್ಧಗಂಗಾ ಆಸ್ಪತ್ರೆ!

1 min read

ತುಮಕೂರು ನ್ಯೂಸ್. ಇನ್
Tumkurnews.in

ಕೊರೊನಾ ರೋಗ ಲಕ್ಷಣ ಹೊರತುಪಡಿಸಿದ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಹಾಗಾಗಿ ಸಿದ್ಧಗಂಗಾ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್ ಶಂಕಿತರ ಚಿಕಿತ್ಸೆಗೆಂದೇ ಪ್ರತ್ಯೇಕಿಸಲಾಗಿದ್ದು ಎಮರ್ಜೆನ್ಸಿಯಿಂದ ಹಿಡಿದು ಶಂಕಿತರು ಗುಣಮುಖರಾಗುವ ತನಕ ಪ್ರತ್ಯೇಕತೆ ಹಾಗೂ ಸುರಕ್ಷತೆಯನ್ನು ಪಾಲಿಸಲಾಗ್ತಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್. ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೋವಿಡ್ ಶಂಕಿತರಿಗೆ ನೀಡುವ ಕುರಿತಾಗಿ ಸ್ಪಷ್ಟನೆ ನೀಡಿರುವ ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಎ.ಬಿ.ಸಿ ಹಾಗೂ ಡಿ ಎನ್ನುವ ನಾಲ್ಕು ವಿಭಾಗಗಳಿದ್ದು ಬಿ ಮತ್ತು ಸಿ ವಿಭಾಗವು ಪ್ರತ್ಯೇಕ ಆಸ್ಪತ್ರೆಯಂತೆ ಪರಿವರ್ತಿಸಲಾಗಿದೆ. ಪ್ರತ್ಯೇಕ ಒಳ ಮತ್ತು ಹೊರ ಹೋಗುವ ಮಾರ್ಗಗಳು, ಲಿಫ್ಟ್ ಪ್ರತ್ಯೇಕ ಎಮರ್ಜೆನ್ಸಿ ಘಟಕ ಎಲ್ಲದರಲ್ಲೂ ಪ್ರತ್ಯೇಕತೆ ಕಾಯ್ದುಕೊಂಡಿದ್ದು ಇಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಎ ಮತ್ತು ಡಿ ಯಲ್ಲಿ ಸಮಾನ್ಯ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಕೊರೊನಾ ಹಾಗೂ ಸಾಮಾನ್ಯ ರೋಗಿಗಳ ವಿಭಾಗಗಳು ಪ್ರತ್ಯೇಕ ಆಸ್ಪತ್ರೆಗಳಂತೆ ಕಾರ್ಯನಿರ್ವಹಿಸುತ್ತಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಐಸಿಎಂಆರ್ ನಿರ್ದೇಶನದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ರೋಗಿ ವಿಭಾಗದವರು ಎಂದಿನಂತೆ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಸಾಮಾನ್ಯ ರೋಗಿಗಳಿಗೆ ಹಾಗೂ ಕೊರೊನಾ ಸೊಂಕಿತರಿಗೆ ಪ್ರತ್ಯೇಕ ಎಮರ್ಜೆನ್ಸಿ ಘಟಕವಿದೆ. ಉಸಿರಾಟದ ತೊಂದರೆಯಾದರೆ ಐಸಿಯು ಘಟಕವನ್ನೂ ಪ್ರತ್ಯೇಕ ವಿಭಾಗದಲ್ಲಿ ಪರಿವರ್ತಿಸಲಾಗಿದೆ.
ಚಿಕಿತ್ಸೆ ನೀಡುವ ತಜ್ಞ ವೈದ್ಯರನ್ನೂ ವಿಂಗಡಿಸಿ, ಶುಶ್ರೂಶಕರಿಂದ ಹಿಡಿದು ಡಿ ದರ್ಜೆ ಸಿಬ್ಬಂದಿಯವರೆಗೂ ಪ್ರತ್ಯೇಕತೆ ಕಾಯ್ದುಕೊಳ್ಳಲಾಗಿದೆ ಎಂದರು.
*
ಎಂದಿನಂತೆ ಹೃದಯ, ಕೀಲು, ಮೂಳೆ, ಬೆನ್ನುಮೂಳೆ, ನರರೋಗ ಚಿಕಿತ್ಸೆ, ಶ್ವಾಸಕೋಶ, ಜೀರ್ಣಾಂಗ ಸಮಸ್ಯೆ, ಕಣ್ಣು, ಕಿವಿ, ಮೂಗು, ಗಂಟಲು, ದಂತ ಸಮಸ್ಯೆ, ಮಕ್ಕಳ ಹಾಗೂ ಗರ್ಭಿಣಿ ಹಾಗೂ ಮಹಿಳೆ ಹಾಗೂ ವಯೋಸಂಬಂಧಿ ಖಾಯಿಲೆಗಳಿಗೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಒಂದೇ ಸೂರಿನಡೆ ವೈದ್ಯರ ಸೇವೆ ನಿರಂತರ 24 ಗಂಟೆಯೂ ದೊರೆಯಲಿದೆ.
ಪ್ರತಿಯೊಬ್ಬ ರೋಗಿಯನ್ನು ಪರೀಕ್ಷೆ ಮಾಡುವಾಗಲೂ ವೈದ್ಯರು ಎಲ್ಲಾ ರೀತಿಯ ಸುರಕ್ಷತೆಯನ್ನು ಪಾಲಿಸುತ್ತಿದ್ದು ಕೊರೊನಾ ಹೊರತು ಪಡಿಸಿ ರೋಗಲಕ್ಷಣವುಳ್ಳ ರೋಗಿಗಳು ಯಾವುದೇ ಆತಂಕವಿಟ್ಟುಕೊಳ್ಳದೆ ಧೈರ್ಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.
*
ತುರ್ತುಚಿಕಿತ್ಸೆಗೆ ಮೊದಲ ಆಧ್ಯತೆ:
ಸಿದ್ಧಗಂಗಾ ಆಸ್ಪತ್ರೆ ಕಳೆದ ಮೂರು ವರ್ಷಗಳಿಂದಲೂ ರಸ್ತೆ ಅಪಘಾತ ಹಾಗೂ ಹೃದಯಾಘಾತದಿಂದ ತುರ್ತು ಚಿಕಿತ್ಸೆಗೆ ದಾಖಲಾಗುವ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ನೂರಾರು ರೋಗಿಗಳು ಇಂತಹ ತುರ್ತು ಅಪಾಯದಿಂದ ಜೀವ ಉಳಿಸಿಕೊಂಡಿದ್ದಾರೆ.
ಸದ್ಯ ಕೊರೊನಾ ಸಮಯದಲ್ಲೂ ಬೆಡ್ ಸಿಗದೆ ರೋಗಿಗಳು ಸಾವನ್ನಪ್ಪುತ್ತಿರುವ ವರದಿಗಳನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ದಾಖಲಾದ ರೋಗಿಗೆ ಕೊರೊನಾಗೆ ಸಂಬಂಧಿಸಿದ ಸುರಕ್ಷತೆಯನ್ನು ಅನುಸರಿಸಿ ಮೊದಲು ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್ ವರದಿ ಬಂದರೆ ಪ್ರತ್ಯೇಕ ವಾರ್ಡ್ ಹಾಗೂ ಇಲ್ಲದಿದ್ದರೆ ಸಾಮಾನ್ಯ ರೋಗಿಗಳಿಗೆ ಮೀಸಲಿರುವ ವಾರ್ಡ್ ಗಳಲ್ಲಿ ಚಿಕಿತ್ಸೆ ಮುಂದುವರೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
*
ಪ್ರತ್ಯೇಕ ಸ್ಕ್ರೀನಿಂಗ್ ಹಾಗೂ ಫ್ಲೋ ಕ್ಲಿನಿಕ್:
ಇನ್ನು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಜ್ವರ, ಶೀತ, ನೆಗಡಿ ಗಂಟಲುನೋವು, ಕೆಮ್ಮು ಹಾಗೂ ಇತರೆ ಕೋವಿಡ್ ಸೊಂಕಿನ ಲಕ್ಷಣವಿದ್ದ ರೋಗಿಗಳು ಬಂದ ತಕ್ಷಣ ಅವರಿಗೆ ಆಸ್ಪತ್ರೆಯಲ್ಲೇ ಪ್ರತ್ಯೇಕ ಫ್ಲೂ ಕ್ಲಿನಿಕ್ ತೆರೆದು ಅಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಶ್ವಾಸಕೋಶದಲ್ಲಿ ಸೊಂಕಿನ ಲಕ್ಷಣಗಳನ್ನು ಕಂಡು ಹಿಡಿಯಲು ಪ್ರತ್ಯೇಕ ಸ್ಕ್ಯಾನಿಂಗ್ ವ್ಯವಸ್ಥೆ ಕೂಡಮಾಡಲಾಗಿದ್ದು, ಕ್ವಾರಂಟೀನ್ ಇರಲು ಬಯಸುವ ಕೊರೊನಾ ಶಂಕಿತರಿಗೆ ಸರ್ಕಾರಿ ಕ್ವಾರಂಟೀನ್ ಕೇಂದ್ರ ಹಾಗೂ ನಮ್ಮ ಆಸ್ಪತ್ರೆಯ ಕ್ವಾರಂಟೀನ್ ವಿಭಾಗ ಎರಡನ್ನೂ ಆಯ್ಕೆ ಮಾಡಿಕೊಳ್ಳುವ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗುವರಿಗೆ ಪ್ರತ್ಯೇಕ ಕೋವಿಡ್ ವಾರ್ಡ್ ತೆರೆದಿದ್ದು ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
*
ಸಿಇಒ ಏನಂತಾರೆ?:
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಮಾತನಾಡಿ ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೂ ಕೂಡ ನಾವು ಆಸ್ಪತ್ರೆಗೆ ಆಗಮಿಸಿದ ತಕ್ಷಣ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಪಯೋಗಿಸುವ ಮಾರ್ಗದರ್ಶನ ಮಾಡಿ ಅವರಿಗೂ ಕೂಡ ಕೂಡ ದೇಹದ ತಾಪಮಾನ ಪರೀಕ್ಷಿಸಿ ಜೊತೆಗೆ ಆಮ್ಲಜನಕ ಪ್ರಮಾಣವನ್ನೂ (ಆಕ್ಸಿಜನ್ ಸ್ಯಾಚುರೇಶನ್ ) ಸ್ಥಳದಲ್ಲಿಯೇ ಚೆಕ್ ಮಾಡಿ ವೈದ್ಯರ ಭೇಟಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಇದರಿಂದ ರೋಗಿಗಳು ಹೆಚ್ಚು ಸುರಕ್ಷಿತರಾಗಿ ವೈದ್ಯರನ್ನು ಭೇಟಿ ಮಾಡುತ್ತಾರೆ ಎಂದರು.
ಪ್ರಸ್ತುತ ಕೆಲ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಆಸ್ಪತ್ರೆ ಸೀಲ್ ಡೌನ್ ಆಗುತ್ತದೆ ಎನ್ನುವ ಭಯಕ್ಕೋ ಅಥವಾ ಇತರೆ ರೋಗಿಗಳು ಬರುವುದಿಲ್ಲ ಎನ್ನುವ ಆತಂಕಕ್ಕೋ ಈ ರೀತಿ ಮಾಡುವುದುಂಟು ಆದರೆ ಸಿದ್ಧಗಂಗಾ ಎಲ್ಲರಿಗೂ ಆರೋಗ್ಯ ಕಲ್ಪಿಸಿಕೊಡುವ ದೃಷ್ಠಿಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಗಾಗಿ ಪ್ರತ್ಯೇಕ ಆಸ್ಪತ್ರೆ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಇದರಿಂದ ರಾಜ್ಯಮಟ್ಟದಲ್ಲಿ ಸಿದ್ಧಗಂಗಾ ಆಸ್ಪತ್ರೆಗೆ ಅಪಾರ ಪ್ರಶಂಶೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ ಬೇರೆ ಕಡೆಗಳಲ್ಲಿ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಸಂದರ್ಭದಲ್ಲಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯು ಕೋವಿಡ್ ಚಿಕಿತ್ಸೆಗಾಗಿ ವಿಶೇಷ ಪ್ರಾಮುಖ್ಯತೆ ನೀಡಿರುವುದು ದೇಶಕ್ಕೆ ಮಾದರಿಯಾಗಿದೆ.

About The Author

You May Also Like

More From Author

+ There are no comments

Add yours