ಜಿಲ್ಲೆಯಲ್ಲಿ 513ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ

1 min read

ತುಮಕೂರು(ಜು.13) tumkurnews.in

ಜಿಲ್ಲೆಯ ಇತರೆ ತಾಲ್ಲೂಕುಗಳಿಗಿಂತಲೂ ತುಮಕೂರು ನಗರದಲ್ಲಿ ಕೊರೋನಾ ಆರ್ಭಟ ಜೋರಾಗಿದೆ. ಸೋಮವಾರ ಒಂದೇ ದಿನ ತುಮಕೂರಿನಲ್ಲಿ 31 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಉಳಿದಂತೆ ಗುಬ್ಬಿ 2, ಕುಣಿಗಲ್ 1, ಶಿರಾ 1 ಸೇರಿದಂತೆ ಒಟ್ಟು 35 ಹೊಸ ಪ್ರಕರಣಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ಒಟ್ಟು 513 ಜನರಲ್ಲಿ ಈವರೆಗೆ ಸೋಂಕು ಕಂಡು ಬಂದಿದ್ದು, ಒಟ್ಟು 361 ಮಂದಿ ಸಕ್ರೀಯ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈತನಕ 137 ಮಂದಿ‌ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಸೋಮವಾರ ಕೂಡ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ ಒಂದು ಸಾವು ಸಂಭವಿಸಿದೆ.

About The Author

You May Also Like

More From Author

+ There are no comments

Add yours