ವಿ.ಸೋಮಣ್ಣಗೆ ಯಾವ ಕ್ಷೇತ್ರದಲ್ಲಿ ಎಷ್ಟು ಲೀಡ್? ಇಲ್ಲಿದೆ ಮಾಹಿತಿ

1 min read

 

ವಿ.ಸೋಮಣ್ಣಗೆ ದಾಖಲೆಯ ಲೀಡ್ ನೀಡಿದ ತುರುವೇಕೆರೆ! ಇಲ್ಲಿದೆ ಕ್ಷೇತ್ರವಾರು‌ ವಿವರ

Tumkurnews
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, ತುರುವೇಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು 40,862 ಮತಗಳ ಲೀಡ್ ದೊರೆತಿದೆ.
ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭೆ ಕ್ಷೇತ್ರದಲ್ಲಿ 25,421 ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಪ್ರತಿನಿಧಿಸುವ ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ 12,802 ಮತಗಳ ಮುನ್ನಡೆಯನ್ನು ವಿ.ಸೋಮಣ್ಣ ಪಡೆದಿದ್ದಾರೆ.

ವಿ.ಸೋಮಣ್ಣಗೆ ವೀರೋಚಿತ ಗೆಲುವು: ವಲಸೆ ಹಕ್ಕಿಗೆ ನೆಲೆ ಕಲ್ಪಿಸಿದ ತುಮಕೂರು!
ಉಳಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 28,820, ಗುಬ್ಬಿ ಕ್ಷೇತ್ರದಲ್ಲಿ 26,490, ತಿಪಟೂರು ಕ್ಷೇತ್ರದಲ್ಲಿ 22,700, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 6,409 ಹಾಗೂ ತುಮಕೂರು ನಗರ ಕ್ಷೇತ್ರದಲ್ಲಿ 5,817 ಮತಗಳ ಲೀಡ್ ಸಿಕ್ಕಿದೆ.

You May Also Like

More From Author

+ There are no comments

Add yours