Tumkur News
ತುಮಕೂರು: ಡಿ ಎಸ್ ಎಸ್ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿಯನ್ನು ಹತ್ಯೆ ಮಾಡಿದ 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾದ್ ತಿಳಿಸಿದರು.
ದೇವೇಗೌಡರಿಗೆ ಸತ್ಯದ ಮನವರಿಕೆ ಆಗಿದೆ ಎಂಬ ವಿಶ್ವಾಸವಿದೆ; ಬಿ.ಸಿ. ನಾಗೇಶ್
ನರಸಿಂಹಮೂರ್ತಿ ಹತ್ಯಾರೋಪಿಗಳ ಬಂಧನ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ಮಂದಿ ಆರೋಪಿಗಳನ್ನು ಕನಕಪುರದ ಹಾರೋಹಳ್ಳಿ ಸಮೀಪ ಫಾರಂ ಹೌಸ್ ನಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.
ಡಿಕೆಶಿ ಪುಸ್ತಕ ಹರಿದು ಹಾಕುವ ಹೊಸ ಸಂಸ್ಕೃತಿ ಹುಟ್ಟು ಹಾಕಿದ್ದಾರೆ; ಬಿ.ಸಿ. ನಾಗೇಶ್
ಕಿರಣ್, ಕ್ಯಾಟ್ ರಾಜ, ಮಂಜು, ಅಭಿಷೇಕ್, ನಯಾಜ್, ವೆಂಕಟೇಶ, ಕೀರ್ತಿ, ಚಂದ್ರಶೇಖರ್, ಭರತ್, ಧೀರಜ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ೭ ದಿನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತೇವೆ ಎಂದರು.
+ There are no comments
Add yours