ಸಿಎಂ ಸ್ಥಾನ ಸಿದ್ದರಾಮಯ್ಯ ಮನೆ ಆಸ್ತಿ ಅಲ್ಲ, ಪರಮೇಶ್ವರ್ ಸಿಎಂ ಆಗಲಿ: ಕೆ.ಎನ್ ರಾಜಣ್ಣ ಅಚ್ಚರಿಯ ಹೇಳಿಕೆ
‘ಪರಮೇಶ್ವರ್ ಕೂಡ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಕೆಲಸ ಮಾಡಿದ್ದಾರೆ. 2013ರಲ್ಲಿ ಗೆದ್ದಿದ್ದರೆ ಅವರೆ ಮುಖ್ಯಮಂತ್ರಿ ಆಗುತ್ತಿದ್ದರು,
ಆಗ ಗೆಲ್ಲಲಿಲ್ಲ, ಹಳೆಯ ಕೂಲಿ ಬಾಕಿ ಇದೆಯಲ್ಲವೇ?’
-ಕೆ.ಎನ್ ರಾಜಣ್ಣ, ಶಾಸಕ, ಮಧುಗಿರಿ.
Tumkur news
ತುಮಕೂರು: ಸಿದ್ದರಾಮಯ್ಯ ಬಳಿಕ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಬದಲಾವಣೆ ಆದರೆ ಪರಮೇಶ್ವರ್ ಸಿಎಂ ಆಗಬೇಕು ಅನ್ನುವವರು ನಾವು. ಪರಮೇಶ್ವರ್ ಕೂಡ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಕೆಲಸ ಮಾಡಿದ್ದಾರೆ. 2013ರಲ್ಲಿ ಗೆದ್ದಿದ್ದರೆ ಅವರೆ ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಗೆಲ್ಲಲಿಲ್ಲ, ಹಳೆಯ ಕೂಲಿ ಬಾಕಿ ಇದೆಯಲ್ಲವೇ ಎಂದು ಪ್ರಶ್ನಿಸಿದರು.
ಸಿಎಂ ಸ್ಥಾನ ಬಿಟ್ಟುಕೊಡಲು ಅದೇನು ಸಿದ್ದರಾಮಯ್ಯನವರ ಮನೆ ಆಸ್ತಿಯಲ್ಲ, ಅಧಿಕಾರ ಯಾರ ಆಸ್ತಿನೂ ಅಲ್ಲ, ಜನ ಕೊಡುವಂತಹ ಭಿಕ್ಷೆ, ಅಧಿಕಾರ ಅನ್ನುವುದು ಯಾರ ಆಸ್ತಿನೂ ಅಲ್ಲ, ನನ್ನ ಆಸ್ತಿನೂ ಅಲ್ಲ, ಇನ್ನೊಬ್ಬನ ಆಸ್ತಿನೂ ಅಲ್ಲ, ಪರಮೇಶ್ವರ್ ಅಸ್ತಿ, ರಾಜಕಾರಣರಣಿಗಳ ಆಸ್ತಿ ಅಲ್ಲ, ನಮಗೆ ಜನ ಕೊಡುವ ಭಿಕ್ಷೆ, ಆ ಭಿಕ್ಷೆ ತೆಗೆದುಕೊಂಡು ಅವನು ಅಷ್ಟು ಕೊಡಬೇಕಿತ್ತು, ಇಷ್ಟು ಕೊಡಬೇಕಿತ್ತು ಅಂತಾ ಜನರನ್ನು ಆಕ್ಷೆಪಣೆ ಮಾಡುವುದಕ್ಕಾಗುವುದಿಲ್ಲ, ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಕೊಡುವಂತ ಅವಕಾಶ, ಅದನ್ನ ಭಿಕ್ಷೆ ಅಂತಾ ಕರೆದರೆ ತಪ್ಪಾಗಲಾರದು ಎಂದರು.
ಮೂರು ವರ್ಷದ ಸಾಧನೆ ಸಮಾರಂಭದ ಬಳಿಕ ಸಿಎಂ ಬದಲಾವಣೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಹೇಳಿದರೆ ನೀವು ಅದನ್ನೆ ತೋರಿಸಿಬಿಡುತ್ತೀರಿ, ಮುಖ್ಯಮಂತ್ರಿಗಳು ಇವತ್ತು ಕೇರಳಕ್ಕೆ ಹೋಗಿದ್ದಾರೆ, ಪ್ರಮಾಣ ವಚನ ಇರೋದು 10 ಗಂಟೆಗೆ, ಎಷ್ಟು ಹೊತ್ತಿಗೆ ಮುಗಿಯಬಹುದು, ಅರ್ಧಗಂಟೆಗೆ ಮುಗಿಯುತ್ತೆ, ಮುಗಿಯುತ್ತಿದ್ದಂತೆ 20 ಜನ ಮಂತ್ರಿಗಳು ಸೇರಿ ಫಸ್ಟ್ ಕ್ಯಾಬಿನೆಟ್ ರಚನೆ ಮಾಡಲಿಕ್ಕೆ ಹೊಗ್ತಾರೆ, ನಾವು ಹೇಳಿರುವ ಗ್ಯಾರಂಟಿಗಳ ಬಗ್ಗೆ ನಿರ್ಣಯ ಮಾಡಲು ಹೋಗುತ್ತಾರೆ ಎಂದರು. ಸಿದ್ದರಾಮಯ್ಯನವರು ಅಲ್ಲೆ 3 ಗಂಟೆವರೆಗೂ ತ್ರಿವೆಂಡ್ರಮ್’ನಲ್ಲೆ ಉಳಿಯುತ್ತಾರೆ, ಅಲ್ಲಿ ಖರ್ಗೆ, ರಾಹುಲ್ ಗಾಂಧಿ, ಡಿ.ಕೆ ಶಿವಕುಮಾರ್ ಇರುತ್ತಾರೆ, ಅಲ್ಲೆ ಯಾಕೆ ಚರ್ಚೆ ಮಾಡಬಾರ್ದು, ಅದರ ಸಾಧ್ಯತೆ ಕೂಡ ಇದೆ, ಆಗಿರಬಹುದು ಎಂಬ ಪ್ರಿಡಿಕ್ಷನ್, 3 ಗಂಟೆವರೆಗೂ ಅಲ್ಲಿದ್ದು ಏನು ಮಾಡುತ್ತಾರೆ, ಅದೇನು ಒಂದು ದಿನ ಪೂರ್ತಿ ಮಾತನಾಡಬೇಕಾ, ಅಲ್ಲೆ ಮೂರ್ನಾಲ್ಕು ಜನ ಸೇರಿಕೊಂಡು 5 ನಿಮಿಷ ಮಾತನಾಡಿ ಒಂದು ಅಭಿಪ್ರಾಯ, ರಾಹುಲ್ ಗಾಂಧಿಯವರ ಬಾಯಿಂದ ಏನು ಬರುತ್ತದೆಯೋ ಅದು ಜಾರಿಯಾಗುತ್ತದೆ ಎಂದು ತಿಳಿಸಿದರು.
ಇವತ್ತೆ ಫೈನಲ್ ಆಗಬಹುದು ಎಂಬುದು ನನ್ನ ವೈಯಕ್ತಿಕ ನಿರೀಕ್ಷೆ, ಅವರ ಟಿಪಿ ನೋಡಿದಿನಿ, ಹಾಗಾಗಿ ಆಗಬಹುದು ಅಂತಾ ಅಂದುಕೊಂಡಿದೀನಿ, ಏಕೆಂದರೆ 3 ಗಂಟೆವರೆಗೂ ಅವರ ಟಿಪಿ ನೋಡಿದಿನಿ, ಬೆಳಗ್ಗೆ 10 ಗಂಟೆಗೆ ಹೊರಡುತ್ತಾರೆ, ಇಲ್ಲಿಂದ, 8.30ಕ್ಕೆ 8.45 ಕ್ಕೆ ತ್ರಿವೆಂಡ್ರಲ್ ರೀಚ್ ಆಗ್ತಾರೆ, 10 ಗಂಟೆಗೆ ಸಿಎಂ ಸೆರಮನಿಯಲ್ಲಿ ಪಾರ್ಟಿಸಿಪೇಟ್ ಮಾಡ್ತಾರೆ, 45 ನಿಮಿಷದಲ್ಲಿ ಮುಗಿದು ಹೋಗುತ್ತದೆ, ಆನಂತರ ಅವರು ಬರಬಹುದಾಗಿತ್ತು, ಆದ್ರೆ 3 ಗಂಟೆವರೆಗೂ ಅಲ್ಲೆ ಉಳಿತಾರೆ. ಎಲ್ಲರೂ ಅಲ್ಲೆ ಇರುವುದರಿಂದ ಏನಾದರೂ ಮಾತುಕತೆ ಆಗಬಹುದು ಅಂತಾ ಅಂದುಕೊಳ್ಳುತ್ತಿದ್ದೀನಿ ಎಂದು ತಿಳಿಸಿದರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ತುಮಕೂರು! ಗಿನ್ನಿಸ್ ರೆಕಾರ್ಡ್! ಯಾವ ಸಾಧನೆಗಾಗಿ? ಇಲ್ಲಿದೆ ಮಾಹಿತಿ
