Ad image

ತುಮಕೂರು: ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಮೋಸ: ಬಯಲಾಯ್ತು ಕಳ್ಳಾಟ

Ashok RP
1 Min Read

ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಮೋಸ: ಬಯಲಾಯ್ತು ಕಳ್ಳಾಟ

Tumkur news
ತುಮಕೂರು: ಬೆಳೆ ವಿಮೆ ಕಂಪನಿಗಳು ಜಿಲ್ಲೆಯ ರೈತರಿಂದ ಕೋಟ್ಯಾಂತರ ರೂ. ವಿಮೆ ಪಾವತಿಸಿಕೊಂಡು ಬಿಡಿಗಾಸಿನ ವಿಮೆ ಮೊತ್ತ ನೀಡಿರುವುದು ಬೆಳಕಿಗೆ ಬಂದಿದ್ದು, ವಿಮಾ ಕಂಪನಿಗಳಿಗೆ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಣಿಗಲ್ ಶಾಸಕ ಎಚ್.ಡಿ ರಂಗನಾಥ್, ವಿಮಾ ಕಂಪನಿಗಳ ಕಳ್ಳಾಟವನ್ನು ಬಯಲು ಮಾಡಿದರು. ವಿಮೆ ಕಂಪನಿಗಳು ರೈತರಿಗೆ ಸರಿಯಾದ ವಿಮೆ ಮೊತ್ತ ನೀಡುತ್ತಿಲ್ಲ, ಕುಣಿಗಲ್ ತಾಲೂಕಿನಲ್ಲಿ ಅತ್ಯಂತ ಕಡಿಮೆ 1453 ರೈತರು ವಿಮೆ ಮಾಡಿಸಿದ್ದಾರೆ. ಇದಕ್ಕೆ ಕಾರಣ, ಕೇಂದ್ರ ಸರ್ಕಾರದ ಮೇಲೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರೈತರು ವಿಮೆ ಮಾಡಿಸುತ್ತಿಲ್ಲ. ಜೊತೆಗೆ ರೈತರಿಗೆ ವಿಮೆ ಮಾಡಿಸುವ ಸಂಬಂಧ ಜಾಗೃತಿ ಮೂಡಿಸಬೇಕು. ಅಲ್ಲದೆ ವಿಮಾ ಕಂಪನಿಗಳ ನಿಬಂಧನೆಗಳನ್ನು ಪರಿಷ್ಕರಿಸಬೇಕು ಹಾಗೂ ನಿಯಮಗಳ ಸಡಿಲಿಕೆಯೂ ಆಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದರು.
ವಿಮಾ ಕಂಪನಿಗಳು ರೈತರ ವಿಮಾ ಹಣದಿಂದಲೇ ಬದುಕುತ್ತಿರವುದು. ಜಿಲ್ಲೆಯಲ್ಲಿ 7 ಕೋಟಿ ರೂ. ವಿಮೆ ಪಡೆದು 1.5 ಕೋಟಿ ರೂ. ಪರಿಹಾರ ನೀಡಿವೆ ಎಂದರೆ ಏನರ್ಥ ಎಂದು ಸಭೆಯಲ್ಲಿ ಶಾಸಕರು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಜಿ.ಪರಮೇಶ್ವರ್, ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದರು.
ವಿಮಾ ಕಂಪನಿ ರೈತರಿಂದ ವಿಮೆ ಮಾಡಿಸಿ ಪರಿಹಾರ ಕೊಡುವಾಗ ನಿಬಂಧನೆಗಳನ್ನು ವಿಧಿಸಿ ಕಡಿಮೆ ಪರಿಹಾರ ನೀಡುವುದು ಸರಿಯಲ್ಲ. ರೈತರಿಗೆ ಸರಿಯಾದ ವಿಮೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಾವೇ ರೈತರಿಗೆ ವಿಮಾ ಮಾಡದಂತೆ ತಿಳಿಸಬೇಕಾಗುತ್ತದೆ.
ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ, ವಿಮಾ ಕಂಪನಿಗಳ ಸಭೆ ಕರೆದು ಚರ್ಚಿಸಿ ನಿಬಂಧನೆಗಳನ್ನು ಸಡಿಲಗೊಳಿಸಲು ತಿಳಿಸಬೇಕು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು, ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *