ತುಮಕೂರಿನಲ್ಲಿ ಘರ್ಜಿಸಿದ ಜೆಸಿಬಿ: ಒತ್ತುವರಿ ತೆರವುಗೊಳಿಸಿದ ಪಾಲಿಕೆ
Tumkurnews
ತುಮಕೂರು: ಮಹಾನಗರ ಪಾಲಿಕೆಯಲ್ಲಿ ರಾತ್ರೋರಾತ್ರಿ ಜೆಸಿಬಿಗಳು ಘರ್ಜನೆ ಮಾಡಿದ್ದು, ಪಾಲಿಕೆ ಜಾಗವನ್ನು ಅತಿಕ್ರಮಿಸಿಕೊಂಡು ನಿರ್ಮಿಸಿದ್ದ ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ.
ಲೋಕಸಭೆ: ಜೂ.4ರಂದು ಮತ ಎಣಿಕೆ: ಏಜೆಂಟ್ ನೇಮಕಕ್ಕೆ ನಿರ್ದೇಶನ
ತುಮಕೂರು ನಗರ ಹೊರವಲಯದ ಎಸ್‌ಎಸ್‌ಐಟಿ ಕಾಲೇಜು ಪಕ್ಕದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪಾಲಿಕೆ ಜಮೀನನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದು, ಶೆಡ್ ನಿರ್ಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಒತ್ತುವರಿ ತೆರವುಗೊಳಿಸಿದ್ದಾರೆ.
ತುಮಕೂರ ನಗರದ ಮರಳೂರಿನ ಸರ್ವೆ ನಂಬರ್ 87/1Aರ ಜಮೀನಿನಲ್ಲಿ ಈ ಒತ್ತುವರಿ ತೆರವು ನಡೆದಿದೆ. ಸದರಿ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಕೆಲವು ವ್ಯಕ್ತಿಗಳು ಅತಿಕ್ರಮ ವಾಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಅಕ್ರಮ ಶೆಡ್’ಗಳನ್ನು ತೆರವುಗೊಳಿಸಿದ್ದು, ಪಾಲಿಕೆಯ ಸ್ವತ್ತು ಎಂದು ಬೋರ್ಡ್ ಹಾಕಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್’ಗೆ ಜನರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ
+ There are no comments
Add yours