ಜೋರು ಮಳೆಯಲ್ಲೇ ಬಸ್ ಸೀಟಿಗಾಗಿ ಪೈಪೋಟಿ
Tumkurnews
ತುಮಕೂರು: ಗೌರಿಗಣೇಶ ಹಬ್ಬದ ನಿಮಿತ್ತ ಸೋಮವಾರ ರಜೆ ಇರುವುದರಿಂದ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜನರು ಸುರಿಯುವ ಮಳೆಯಲ್ಲಿ ಬಸ್ ಹತ್ತಲು ಪ್ರಯಾಸ ಪಡುತ್ತಿದ್ದ ದೃಶ್ಯಗಳು ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಕಂಡು ಬಂದವು.
ಭಾನುವಾರ ಹಾಗೂ ಸೋಮವಾರ ರಜೆ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹೆಚ್ಚು ಜನಸಂದಣಿ ಉಂಟಾಗಿತ್ತು.
ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: 2454 ಹುದ್ದೆಗಳಿಗೆ ನೇಮಕಾತಿ
ಜನರು ಬಸ್’ನಲ್ಲಿ ಸೀಟು ಹಿಡಿಯಲು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳುತ್ತಿದ್ದರು. ಸೀಟು ಹಿಡಿಯಲು ಕೆಲವು ಪ್ರಯಾಣಿಕರು ಚಾಲಕರ ದ್ವಾರದಿಂದ ಹತ್ತುತ್ತಿದ್ದ ದೃಶ್ಯ ಕಂಡು ಬಂದವು.
ಭರ್ಜರಿ ಮಳೆ: ಮಧ್ಯಾಹ್ನದ ಬಳಿಕ ನಗರದಲ್ಲಿ ಭರ್ಜರಿ ಮಳೆಯಾಗಿದ್ದು, ಜೋರು ಮಳೆಯಲ್ಲೇ ಜನ ಬಸ್ ಹತ್ತಿ ಊರು ಸೇರಿದರು.
ಎರಡು ಬಸ್’ಗಳ ನಡುವೆ ಸಿಲುಕಿ ಮಹಿಳೆಯರ ಸಾವು; KSRTC ಬಸ್ ನಿಲ್ದಾಣದಲ್ಲಿ ಘಟನೆ
+ There are no comments
Add yours