ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

1 min read

ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

Tumkurnews
ತುಮಕೂರು: ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸಿ, ಕಲಿಕಾ ಮತ್ತು ಬೋಧನಾ ಸಾಮಗ್ರಿಗಳನ್ನು ಖರೀದಿಸಲು ವಿಶೇಷ ಪ್ರೊತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕ ಸಹಾಯ ಮಾಡುವ ಹಿತದೃಷ್ಟಿಯಿಂದ National Council for Teacher Education ನಿಂದ ಮಾನ್ಯತೆ ಪಡೆದಿರುವ ಬಿ.ಎಡ್ ಹಾಗೂ Department of State Educational Research and Training ನಿಂದ ಮಾನ್ಯತೆ ಪಡೆದಿರುವ ಡಿ.ಎಡ್. ಕೋರ್ಸುಗಳ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್. ಮತ್ತು ಡಿ.ಎಡ್. ಕೋರ್ಸುಗಳಲ್ಲಿ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ.25,000ಗಳ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು.
ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಅಭ್ಯರ್ಥಿಗಳ ಪೋಷಕರ ವಾರ್ಷಿಕ ಗರಿಷ್ಠ ವರಮಾನ ರೂ.6 ಲಕ್ಷಕ್ಕೆ ಮೀರಿರಬಾರದು. ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಹಿಂದಿನ ವರ್ಷದ ಅಂಕಪಟ್ಟಿ, ಶುಲ್ಕ ಪಾವತಿಸಿದ ರಶೀದಿ, ಬ್ಯಾಂಕ್ ಖಾತೆಯ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ, ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರ ಲಗತ್ತಿಸಿ ಸೆಪ್ಟೆಂಬರ್ 30ರೊಳಗಾಗಿ ಸಲ್ಲಿಸಬೇಕು.
ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಆನ್‍ಲೈನ್ ಜಾಲತಾಣ ವಿಳಾಸ https://dom.karnataka.nic.in/tumkur/publicview ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿಯನ್ನು ಪ್ರಾಂಶುಪಾಲರಿಂದ ದೃಢೀಕರಿಸಿದ ದಾಖಲಾತಿಗಳು ಹಾಗೂ ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು-572101 ಇವರಿಗೆ ಸಲ್ಲಿಸಲು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours