ಚಾರ್ಮಾಡಿ ಘಾಟ್’ನಲ್ಲಿ ದಟ್ಟ ಮಂಜು: 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ: ವಿಡಿಯೋ

1 min read

 

ಚಾರ್ಮಾಡಿ ಘಾಟ್’ನಲ್ಲಿ ಮಂಜು ಮುಸುಕಿದ ವಾತಾವರಣ: ದಾರಿ ಕಾಣದೆ ಪ್ರಪಾತಕ್ಕೆ ಉರುಳಿದ ಲಾರಿ

ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ಸುತ್ತಮುತ್ತ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮಂಜು ಮುಸುಕಿದ ವಾತಾವರಣದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಇಬ್ಬರ ಬಲಿ ಪಡೆದ ಫ್ರೀ ಬಸ್: ಗೊರವನಹಳ್ಳಿ ಲಕ್ಷ್ಮಿಗೆ ಬಂದವರ ಸಾವು: ವಿಡಿಯೋ
ಶುಕ್ರವಾರ ರಾತ್ರಿ ನೀರಿನ ಬಾಟಲ್ ತುಂಬಿದ ಲಾರಿಯೊಂದು ಮಂಜು ಮುಸುಕಿನಲ್ಲಿ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ: ಸಾಲ ವಸೂಲಾತಿಗೆ ತಡೆ
ಪ್ರಾಣ ಉಳಿಸಿದ ಮರ: ಲಾರಿ ಬಿದ್ದ ಜಾಗದಲ್ಲಿ ಬೃಹದಾಕಾರದ ಮರವಿದ್ದು, ಆ ಮರಕ್ಕೆ ಲಾರಿ ತಗಲಿಕೊಂಡು ನಿಂತಿದೆ. ಮರ ಇಲ್ಲದಿದ್ದರೆ ಸಾವಿರ ಅಡಿ ಪ್ರಪಾತಕ್ಕೆ ಲಾರಿ ಬೀಳುತ್ತಿತ್ತು. ಚಾರ್ಮಾಡಿ ಘಾಟ್ ಸೋಮನ ಕಾಡು ಸಮೀಪ ಘಟನೆ ನಡೆದಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ.

ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ

About The Author

You May Also Like

More From Author

+ There are no comments

Add yours