ಬಿಜೆಪಿಗೆ ಒಂದೇ ಒಂದು ವೋಟು ಹಾಕಬೇಡಿ: ಸಿಎಂ ಸಿದ್ದು ನೀಡಿದ ಕಾರಣವೇನು?

1 min read

ಬಿಜೆಪಿಗೆ ಒಂದೇ ಒಂದು ವೋಟು ಹಾಕಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ

Tumkurnews:.
ಮಧುಗಿರಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಒಂದೇ ಒಂದು ವೋಟು ಹಾಕಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಕ್ಷೀರಭಾಗ್ಯ ದಶಮಾನೋತ್ಸವ: ಸಿಎಂ, ಪರಂ, ರಾಜಣ್ಣ ಭಾಷಣದಲ್ಲಿ ಹೇಳಿದ್ದೇನು? ಸಮಗ್ರ ವರದಿ
ನಗರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಕ್ಷೀರ ಭಾಗ್ಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಬಡವರಿಗೆ ಉಚಿತ ಕೊಡುಗೆಗಳನ್ನು ನೀಡುವ ಯೋಜನೆಗಳಿಗೆ ಬಿಜೆಪಿ ವಿರೋಧ ಮಾಡುತ್ತಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಬಾರದು ಎಂದು ಕಾರಣ ಸಹಿತವಾಗಿ ಜನರಲ್ಲಿ ಮನವಿ ಮಾಡಿದರು.

ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಬಡವರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಉಚಿತವಾಗಿ ಅಕ್ಕಿ ಕೊಡುತ್ತಿದೆ. ಅದನ್ನು ಬಿಜೆಪಿ ವಿರೋಧಿಸುತ್ತಿದೆ. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಬಡವರಿಗೆ ಉಚಿತವಾಗಿ ಯೋಜನೆಯನ್ನು ಕೊಟ್ಟರೆ ರಾಜ್ಯಗಳು ದಿವಾಳಿಯಾಗುತ್ತವೆ ಎನ್ನುತ್ತಾರೆ. ಬಡವರಿಗೆ ಯೋಜನೆ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆಯೇ? ಅಂಬಾನಿ, ಅದಾನಿಗೆ ಕೊಟ್ಟರೆ ದಿವಾಳಿಯಾಗುವುದಿಲ್ಲವೇ? ಎಂದು ಸಿಎಂ ಪ್ರಶ್ನಿಸಿದರು.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ನಮ್ಮ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆ ನೀಡಿದೆ. ಉಚಿತವಾಗಿ 200 ಯೂನಿಟ್ ವಿದ್ಯುತ್ ಬಳಕೆ ಮಾಡಲು ನೀಡಲಾಗಿದೆ. ಹೆಚ್ಚುವರಿ ಐದು ಕೆ.ಜಿ ಅಕ್ಕಿಗೆ ಬದಲಾಗಿ ಹಣ ನೀಡಲಾಗುತ್ತಿದೆ. ನಿರುದ್ಯೋಗಿಗಳಿಗೆ ಯುವನಿಧಿಯನ್ನು ನೀಡಲಾಗುತ್ತದೆ. ಇಂತಹ ‌ಜನೋಪಯೋಗಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತದೆ ‌ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು: ಇಂದು 11ರಿಂದ ಸಂಜೆ 4ರ ವರೆಗೆ ಈ ಪ್ರದೇಶಗಳಲ್ಲಿ ಪವರ್ ಕಟ್: ಗಮನಿಸಿ

About The Author

You May Also Like

More From Author

+ There are no comments

Add yours