ವಿದ್ಯುತ್ ಸಂಬಂಧಿಸಿದ ಯಾವುದೇ ವಿಚಾರಣೆ ಮತ್ತು ಮಾಹಿತಿಗಾಗಿ 1912 ಬೆಸ್ಕಾಂ ಸಹಾಯವಾಣಿ ಸಂಪರ್ಕಿಸಿ
Tumkurnews
ತುಮಕೂರು: ವಿದ್ಯುತ್ ಅತ್ಯಮೂಲ್ಯವಾದ ಸಂಪತ್ತು. ಇದು ಮುಗಿದು ಹೋಗುವ ಸಂಪನ್ಮೂಲವಾಗಿರುವುದರಿಂದ ಗ್ರಾಹಕರು ಜಾಗರೂಕತೆಯಿಂದ ಬಳಸಿ ಸಂರಕ್ಷಿಸಬೇಕು ಎಂದು ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಲೋಕೇಶ್ ತಿಳಿಸಿದರು.
ನಗರದ ಹೊರಪೇಟೆಯಲ್ಲಿರುವ ಇಂಜಿನಿಯರ್ ಅಸೋಸಿಯೇಷನ್ ಹಾಲ್‍ನಲ್ಲಿ ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯಿಂದ ಏರ್ಪಡಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ತಿಪಟೂರು ಕೊಬ್ಬರಿ ಧಾರಣೆ
ಮಳೆ ಅಭಾವದ ನಡುವೆಯೂ ಬೇರೆ ಬೇರೆ ಕಡೆಯಿಂದ ವಿದ್ಯುತ್ ಉತ್ಪಾದನೆ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರತಿ ಯೂನಿಟ್ ಉತ್ಪಾದನೆಗೂ ಬಹಳ ಕಷ್ಟದ ಪರಿಸ್ಥಿತಿ ಇದೆ. ಇಂತಹ ವಿದ್ಯುತ್ತನ್ನು ಗ್ರಾಹಕರು ಮನಬಂದಂತೆ ಬಳಸದೆ ಅಗತ್ಯಕ್ಕೆ ತಕ್ಕಂತೆ ಬಳಬೇಕು ಎಂದರು.
ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲೂ ಪ್ರತಿ ಯೂನಿಟ್ ವಿದ್ಯುತ್ತನ್ನು ಕೊಡಲಾಗುತ್ತಿದೆ. ಹೆಚ್ಚಿನ ಮಹತ್ವವನ್ನು ವಿದ್ಯುತ್‍ಗೆ ನೀಡಬೇಕು. ಒಂದು ಪ್ರಮುಖವಾದ ವಸ್ತುವಿಗೆ ಕೊಡುವಷ್ಟು ಬೆಲೆಯನ್ನು ವಿದ್ಯುತ್‍ಗೂ ಕೊಡಬೇಕು ಎಂದು ಅವರು ಹೇಳಿದರು.
ಹೊಸದಾಗಿ ಮನೆ, ಲೇಔಟ್, ಕಟ್ಟಡ ನಿರ್ಮಾಣ ಮಾಡುವಾಗ ವೆಲ್ಡಿಂಗ್, ಗ್ರಾನೈಟ್ ಇನ್ನಿತರೆ ವಿದ್ಯುತ್ ಉಪಯೋಗಿಸುವಂತಹ ಕೆಲಸಗಳಿಗೆ ಬೆಸ್ಕಾಂನಿಂದ ಅನುಮತಿ ಪಡೆಯಬೇಕು. ಜತೆಗೆ ಎಲ್.ಟಿ. 7 ಜಕಾತಿಯ ಮೀಟರ್ ಪಡೆಯಬೇಕು. ಹಳೆ ಮನೆಯ ಮೀಟರ್’ಗೆ ಸಂಪರ್ಕ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ವಿದ್ಯುತ್ ಬಳಕೆ ಬಗ್ಗೆ ಗ್ರಾಹಕರಿಗೆ ಸಪ್ತಾಹ ಅವಧಿಯಲ್ಲಿ ಮಾತ್ರ ಜಾಗೃತಿ ಮೂಡಿಸುವುದಲ್ಲ, ನಿರಂತರವಾಗಿ ಜನರಲ್ಲಿ ವಿದ್ಯುತ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
18 ವರ್ಷ ತುಂಬಿದೆಯೇ? ತೆಂಗು ಉದ್ದಿಮೆ ಆರಂಭಿಸಿ, ಪಡೆಯಿರಿ 15 ಲಕ್ಷ ರೂ.ವರೆಗೆ ಸಹಾಯ ಧನ!
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಅಂಗಡಿ ಮತ್ತು ಚಿಲ್ಲರೆ ಅಂಗಡಿ, ಮಾಣಿಜ್ಯ ಅಂಗಡಿಗಳ ಉಪಯೋಗಕ್ಕಾಗಿ ವಾಸದ ಮನೆಯ ಮೀಟರ್’ಗೆ ಸಂಪರ್ಕ ಮಾಡಿಕೊಳ್ಳದೆ ಎಲ್.ಟಿ. 3 ಜಕಾತಿಯ ಮೀಟರ್’ಗೆ ಪಡೆದುಕೊಳ್ಳಬೇಕು. ಸಣ್ಣಕೈಗಾರಿಕೆ ಮತ್ತು ಇತರೆ ಕೈಗಾರಿಕಾ ಉದ್ದೇಶಕ್ಕಾಗಿ ವಿದ್ಯುತ್ ಬಳಸುವುದಾದರೆ ಬೆಸ್ಕಾಂನಿಂದ ಎಲ್.ಟಿ. 5 ಜಕಾತಿಯ ಮೀಟರ್ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಸ್ಕಾಂ ಜಾಗೃತ ದಳದ ಇನ್ಸ್‌ಪೆಕ್ಟರ್ ಡಿ.ಜಿ. ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗಿದೆ. ಬೆಸ್ಕಾಂ ಕಳ್ಳತನ ಮತ್ತು ದುರುಪಯೋಗದ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದರು.
ವಿದ್ಯುತ್ ಸಂಬಂಧಿಸಿದ ಯಾವುದೇ ವಿಚಾರಣೆಗಾಗಿ ಮತ್ತು ಮಾಹಿತಿಗಾಗಿ 1912 ಬೆಸ್ಕಾಂ ಸಹಾಯವಾಣಿ 24×7 ಕರ್ತವ್ಯ ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಬೆಸ್ಕಾಂ ಮಿತ್ರ, ಬೆಸ್ಕಾಂ ಹೆಚ್.ಟಿ. ಗ್ರಾಹಕ ಮುಂತಾದ ಮೊಬೈಲ್ ಅಪ್ಲಿಕೇಷನ್‍ಗಳನ್ನು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮನೆಯ ಅಥವಾ ಯಾವುದೇ ರೀತಿಯ ಕಟ್ಟಡದ ಮೀಟರ್ ಅನ್ನು ಕಡ್ಡಾಯವಾಗಿ ಬೆಸ್ಕಾಂ ಸಿಬ್ಬಂದಿಗಳಿಗೆ ಕಾಣುವಂತೆ ಅಳವಡಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಜಾಗೃತ ದಳದ ಪಿಎಸ್‍ಐ ರಂಗನಾಥ್, ಬೆಸ್ಕಾಂ ಎಇಇಗಳಾದ ಗುರುರಾಜ್, ಕರಿಯಪ್ಪ, ವೆಂಕಟೇಶ್, ಮಲ್ಲಣ್ಣ ಮತ್ತಿತರರು ಉಪಸ್ಥಿತರಿದ್ದರು.
ಸರಣಿ ಅಪಘಾತದಲ್ಲಿ ಇಬ್ಬರು ದಾರುಣ ಸಾವು: ಸ್ವಂತ ಊರಿಗೆ ಹೊರಟವರು ಸಾವಿನ ಮನೆ ಸೇರಿದರು
+ There are no comments
Add yours