ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7 ಮಂದಿ ನಾಪತ್ತೆ
Tumkurnews
ತುಮಕೂರು: ಗುಬ್ಬಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 7 ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ತಿಳಿಸಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ!
ಪ್ರಕರಣ-1 ರತ್ನಮ್ಮ ಎಂಬ 35 ವರ್ಷದ ಮಹಿಳೆಯು ನಿಟ್ಟೂರು ಬಸ್ ನಿಲ್ದಾಣದಿಂದ ಫೆಬ್ರವರಿ 5, 2023ರಿಂದ ನಾಪತ್ತೆಯಾಗಿದ್ದಾಳೆ. ಈಕೆಯು 5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಳು.
ಪ್ರಕರಣ-2 ನಾಗಮ್ಮ ಎಂಬ 35 ವರ್ಷದ ಮಹಿಳೆಯು ಬಂಡಿಹಳ್ಳಿ ಗ್ರಾಮದಿಂದ ಸೆಪ್ಟೆಂಬರ್ 9, 2022ರಿಂದ ಕಾಣೆಯಾಗಿದ್ದು, ಈಕೆಯು ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಸೀರೆ ಮತ್ತು ಜಾಕೀಟ್ ಧರಿಸಿದ್ದಳು.
ಪ್ರಕರಣ-3 ಯೋಗೀಶ್ ಕೆ. ಎಂಬ 40 ವರ್ಷದ ವ್ಯಕ್ತಿಯು ಫೆಬ್ರವರಿ 9, 2023ರಂದು ಕಡಬ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈತನು 182 ಸೆಂ.ಮೀ. ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಷರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದನು.
ಅತ್ಯಾಚಾರ ಎಸಗಿದರೆ ಗಲ್ಲುಶಿಕ್ಷೆ; ಭಾರತದಲ್ಲಿ ಕಠಿಣ ಕಾನೂನು ಜಾರಿ
ಪ್ರಕರಣ-4 ಬಿ.ಆರ್.ರಘು ಎಂಬ 27 ವರ್ಷದ ಯುವಕನು ನವೆಂಬರ್ 22, 2022ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಕಡಬ ಕಡೆಗೆ ನಡೆದುಕೊಂಡು ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈತನು ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದು, ತೊದಲು ನುಡಿಯುತ್ತಿದ್ದನು. ಈತನು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ.
ಬೆಳೆ ಸಮೀಕ್ಷೆಗೆ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಕೃಷಿ ಇಲಾಖೆ; ಇಲ್ಲಿದೆ ಮಾಹಿತಿ
ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ.
ಪ್ರಕರಣ-5 ಚಿಕ್ಕಹನುಮಂತಯ್ಯ ಎಂಬ 60 ವರ್ಷದ ವೃದ್ಧನು ಫೆಬ್ರವರಿ 13, 2023 ರಿಂದ ನಾಪತ್ತೆಯಾಗಿದ್ದಾನೆ. ಈತನು 5 ಅಡಿ ಎತ್ತರ, ಕಪ್ಪು ಮೈಬಣ್ಣ ಹೊಂದಿದ್ದು, ಕೋಳಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಕಾಣೆಯಾದ ಸಂದರ್ಭದಲ್ಲಿ ತುಂಬು ತೋಳಿನ ಹಳದಿ ಷರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದನು.
ಪ್ರಕರಣ-6 ಗಂಗಾಧರಯ್ಯ ಎಂಬ 60 ವರ್ಷದ ವೃದ್ಧನು ಗೃಹಪ್ರವೇಶಕ್ಕೆಂದು ಏಪ್ರಿಲ್ 27, 2023ರಂದು ನೆಂಟರ ಮನೆಗೆ ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈತನು 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಮೂಕರಾಗಿರುತ್ತಾರೆ. ತುಂಬು ತೋಳಿನ ಕಾಫಿ ಬಣ್ಣದ ಷರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದನು.
ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ: ಅರ್ಜಿ ಆಹ್ವಾನ
ಪ್ರಕರಣ-7 ಬಸವರಾಜು ಎಂಬ 41 ವರ್ಷದ ವ್ಯಕ್ತಿಯು ಜೂನ್ 10, 2023ರಂದು ಕೆಲಸವಿದೆ ಎಂದು ಮನೆಯಲ್ಲಿ ಹೇಳಿ ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈತನು 173 ಸೆಂ.ಮೀ. ಎತ್ತರ, ಕೋಲು ಮುಖ, ಎಡಗೈ ಮುಂಗೈ ಮೇಲೆ ಆಂಜನೇಯ ದೇವರ ಅಚ್ಚೆ ಇರುತ್ತದೆ.
ಕಾಣೆಯಾದ ಇವರುಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ದೂ.ವಾ.ಸಂ. 08131-222229, 08132-222210, 08135-275257, 0816-2278000ಯನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಅಧಿಕಾರಿಗಳೊಂದಿಗೆ ಡಿಸಿ ವಿಡಿಯೋ ಕಾನ್ಫರೆನ್ಸ್; ಇಲ್ಲಿದೆ ಸಮಗ್ರ ಸುದ್ದಿ
+ There are no comments
Add yours