ತುಮಕೂರು-HAL ಬಸ್ ಸಂಚಾರಕ್ಕೆ ಚಾಲನೆ; ಸ್ಥಳೀಯರಿಗೆ ಉದ್ಯೋಗ; ಪರಂ ಚರ್ಚೆ

1 min read

ತುಮಕೂರು-HAL ಬಸ್ ಸಂಚಾರಕ್ಕೆ ಚಾಲನೆ; ಸ್ಥಳೀಯರಿಗೆ ಉದ್ಯೋಗ; ಪರಂ ಚರ್ಚೆ

Tumkurnews.in
ತುಮಕೂರು; ಗುಬ್ಬಿ ತಾಲ್ಲೂಕಿನ ಹೆಚ್.ಎ.ಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ಉತ್ಪಾದನಾ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ತುಮಕೂರಿನಿಂದ ಎಚ್.ಎ.ಎಲ್ ಗೆ ಬಸ್ ಸೇವೆಗೆ ಚಾಲನೆ ನೀಡಲಾಯಿತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್; ಅರ್ಜಿ ಆಹ್ವಾನ
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಶುಕ್ರವಾರ ತುಮಕೂರು- ಎಚ್.ಎ.ಎಲ್ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ಎಚ್.ಎ.ಎಲ್ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ದೃಷ್ಟಿಯಿಂದ ತುಮಕೂರು – ಹೆಚ್.ಎ.ಎಲ್ ನೂತನ ಮಾರ್ಗಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದೇ ವೇಳೆ ಸದರಿ ಘಟಕಕ್ಕೆ ಭೇಟಿ ನೀಡಿ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವುದರ ಕುರಿತು ಆಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತುಮಕೂರುವರೆಗೂ ಮೆಟ್ರೋ ವಿಸ್ತರಣೆ!; ಎಲ್ಲಿಯವರೆಗೆ ಬರುತ್ತೆ ಗೊತ್ತೇ?
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, KSRTC ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿಚಂದ್ರಶೇಖರ್, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours