ಅತ್ಯಾಚಾರ ಎಸಗಿದರೆ ಗಲ್ಲುಶಿಕ್ಷೆ; ಭಾರತದಲ್ಲಿ ಕಠಿಣ ಕಾನೂನು ಜಾರಿ
Tumkurnews.in
ನವದೆಹಲಿ; ದೇಶದಲ್ಲಿ 163 ವರ್ಷಗಳಿಂದ ಅಸ್ತಿತ್ವದಲ್ಲಿರುವ ಬ್ರಿಟಿಷ್ ಕಾಲದ ಮೂರು ಕಾಯ್ದೆಗಳನ್ನು ರದ್ದುಗೊಳಿಸಿ, ನೂತನ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಲೋಕಸಭೆಯಲ್ಲಿ ಮಸೂದೆ ಮಂಡಿಸಿದೆ.
ಅತ್ಯಾಚಾರ, ಗುಂಪು ಹಲ್ಲೆಯಂತಹ ಅಪರಾಧಗಳಿಗೆ ಮರಣ ದಂಡನೆಯವರೆಗೂ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ.
ಪ್ರಮುಖ ಬದಲಾವಣೆಗಳು; ನೂತನ ಮಸೂದೆಯಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಮಾಡಲಾಗಿದೆ.
1) ಸಾಮೂಹಿಕ ಅತ್ಯಾಚಾರ ಎಸಗಿದರೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ, ಅಪ್ರಾಪ್ತ(18 ವರ್ಷಕ್ಕಿಂತ ಕಡಿಮೆ) ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರೆ ಜೀವಿತಾವಧಿ ಶಿಕ್ಷೆ ಅಥವಾ ಮರಣ ದಂಡನೆ ವಿಧಿಸಲಾಗುತ್ತದೆ.
2) ಗುರುತು ಮರೆಮಾಚಿ ಮಹಿಳೆಯನ್ನು ವಿವಾಹವಾವುದು ಅಪರಾಧ.
3) ಗುಂಪು ಹಲ್ಲೆ ನಡೆಸಿದರೆ 7 ವರ್ಷ ಶಿಕ್ಷೆ ಅಥವಾ ಜೀವಿತಾವಧಿ ಶಿಕ್ಷೆ ಅಥವಾ ಮರಣ ದಂಡನೆ ವಿಧಿಸಲು ಅವಕಾಶ ಇದೆ.
4) ಆರೋಪ ಪಟ್ಟಿಯನ್ನು 90 ದಿನಗಳಲ್ಲಿ ಸಲ್ಲಿಸಬೇಕು, ನ್ಯಾಯಾಲಯವು ಇನ್ನೂ 90 ದಿನಗಳ ವರೆಗೆ ಕಾಲಾವಕಾಶ ನೀಡಬಹುದು. ಪ್ರಕರಣದ ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ, ವಿಚಾರಣೆಗೆ ಕಳುಹಿಸಬೇಕು.
4) ಝೀರೋ ಎಫ್.ಐ.ಆರ್ ದಾಖಲಿಸಿದ 15 ದಿನಗಳಲ್ಲಿ ಸಂಬಂಧಿಸಿದ ಠಾಣೆಗೆ ದೂರನ್ನು ತಲುಪಿಸಬೇಕು, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೋ ದಾಖಲೆ ಮಾಡಬೇಕು.
5)ಸರ್ಕಾರಿ ನೌಕರರ ಮೇಲೆ ಪ್ರಕರಣ ದಾಖಲಿಸಲು ಆಯಾ ಇಲಾಖೆಯು 120 ದಿನಗಳಲ್ಲಿ ಅನುಮತಿ ನೀಡಬೇಕು ಅಥವಾ ನಿರಾಕರಿಸಬಹುದು, ಈ ಅವಧಿಯಲ್ಲಿ ಅನುಮತಿ ಬರಲಿಲ್ಲ ಎಂದಾದರಲ್ಲಿ ಇಲಾಖೆಯು ಅನುಮತಿ ನೀಡಿದೆ ಎಂದರ್ಥ.
6) ಶೋಧ ಕಾರ್ಯ ಹಾಗೂ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಡಿಯೋ ಚಿತ್ರಿಕರಣ ಕಡ್ಡಾಯ. ಚಿತ್ರಿಕರಣದ ದಾಖಲೆ ಇಲ್ಲದೆ ಚಾರ್ಜ್ ಶೀಟ್ ದಾಖಲಿಸುವಂತಿಲ್ಲ.
7) ವಿವಾಹಿತ ವ್ಯಕ್ತಿ ಮತ್ತು ಪತ್ನಿಯಲ್ಲದ ಮತ್ತೊಂದು ಮಹಿಳೆಯ ನಡುವಿನ ಸಮ್ಮತಿಯ ಲೈಂಗಿಕ ಸಂಪರ್ಕ ಅಪರಾಧವಲ್ಲ.
8) ಕಾನೂನಿನ ಶಿಕ್ಷೆಯಿಂದ ಯಾರಾದರೂ ತಪ್ಪಿಸಿಕೊಂಡರೆ ಅಂತವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಬಹುದು.
9) ಏಳು ವರ್ಷಕ್ಕಿಂತ ಅಧಿಕ ಶಿಕ್ಷೆಯಿರುವ ಅಪರಾಧ ಕೃತ್ಯ ಸಂಭವಿಸಿದಾಗ ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡುವುದು ಕಡ್ಡಾಯ.
10) ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದವರಿಗೆ ಒಂದು ವರ್ಷ ಜೈಲು ಶಿಕ್ಷೆ.
ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
+ There are no comments
Add yours