ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಉದ್ಯೋಗ; ನೇರ ಸಂದರ್ಶನ
Tumkurnews
ತುಮಕೂರು: ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಟ್ರಾಮ ಕೇರ್ ಸೆಂಟರ್’ಗೆ ತಜ್ಞ ವೈದ್ಯರು ಮತ್ತು ಅಪಘಾತ ಚಿಕಿತ್ಸಾ ವೈದ್ಯರು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ತಜ್ಞರು, ವೈದ್ಯಾಧಿಕಾರಿಗಳು ಸಂಬಂಧಿಸಿದ ಅಗತ್ಯ ಅರ್ಜಿ ಮತ್ತು ಮೂಲ ದಾಖಲೆಗಳೊಂದಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿ, ಜಿಲ್ಲಾ ಆಸ್ಪತ್ರೆ, ತುಮಕೂರು ಇಲ್ಲಿ ಜುಲೈ 14ರಂದು ಬೆಳಿಗ್ಗೆ 10.30 ಗಂಟೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ನ್ಯೂರೋ ಸರ್ಜನ್, ರೇಡಿಯೋಲಜಿಸ್ಟ್, ಅನಸ್‍ಥೀಸಿಯಾಲಜಿಸ್ಟ್, ಆರ್ಥೋಪಿಡಿಕ್ ಸರ್ಜನ್, ಜನರಲ್ ಸರ್ಜನ್, ಅಪಘಾತ ಚಿಕಿತ್ಸಾ ವೈದ್ಯರುಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ.
ಸಂಬಂಧಿಸಿದ ತಜ್ಞತೆಯಲ್ಲಿ ಸ್ನಾತಕೋತ್ತರ ಪದವಿ(ಎಂಎಸ್, ಎಚಿಡಿ/ಡಿಎನ್‍ಬಿ) ಪಡೆದು ಕನಿಷ್ಟ 5 ವರ್ಷಗಳ ಅನುಭವ ಹೊಂದಿರಬೇಕು. ಸೂಪರ್ ಸ್ಪೆಷಾಲಿಟಿ ತಜ್ಞತೆಗೆ ಎಂ.ಎಸ್.ಆರ್ಥೋ ವಿಭಾಗದಲ್ಲಿ ಟ್ರಾಮ ಫೆಲೋಷಿಪ್ ಹೊಂದಿರಬೇಕು. ಯಾವುದೇ ಇತರೆ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ಹೊಂದಿರಬಾರದು. ಈ ಗುತ್ತಿಗೆ ಅವಧಿಯು ಒಂದು ವರ್ಷಕ್ಕೆ ಸೀಮಿತವಾಗಿದ್ದು, ನಂತರದಲ್ಲಿ ತೃಪ್ತಿಕರ ಸೇವೆ ಆಧಾರದ ಮೇಲೆ ಗುತ್ತಿಗೆ ಅವಧಿ ಮುಂದುವರೆಸಲು ತಿಳಿಸಲಾಗುವುದು. 60 ವರ್ಷ ಮೀರಿರಬಾರದು, ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿರಬೇಕು. ತಜ್ಞ ವೈದ್ಯರು ಮತ್ತು ಅಪಘಾತ ಚಿಕಿತ್ಸಾ ವೈದ್ಯರುಗಳಿಗೆ ತಿಂಗಳಿಗೆ ಸರ್ಕಾರಿ ಆದೇಶದಂತೆ ಗುತ್ತಿಗೆ ಆಧಾರದ ವೇತನ ಪಾವತಿಸಲಾಗುವುದು. ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನಲ್ಲಿ ನೋಂದಣಿ ಕಡ್ಡಾಯವಾಗಿದ್ದು, ಪ್ರಮಾಣ ಪತ್ರ ಸಲ್ಲಿಸಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರಾಯನದುರ್ಗದಲ್ಲಿ ಜೆಸಿಬಿ ಘರ್ಜನೆ; ರೆಸಾರ್ಟ್ ನಿರ್ಮಾಣಕ್ಕೆ 49 ಎಕರೆ ಅರಣ್ಯ ನಾಶ
+ There are no comments
Add yours