ತಾಯಿ-ಮಗು ನಾಪತ್ತೆ
Tumkurnews
ತುಮಕೂರು; ನಗರ ಪೊಲೀಸ್ ಠಾಣೆ ವ್ಯಾಪ್ತಿ ದಿಬ್ಬೂರು ಜನತಾ ಕಾಲೋನಿ ನಿವಾಸಿಯಾದ 25 ವರ್ಷ ವಯಸ್ಸಿನ ಕುಸುಮ ಹಾಗೂ 6 ತಿಂಗಳ ಮಗಳು ಗ್ರೇಸಿಯೊಂದಿಗೆ ಮೇ 16ರಂದು ತನ್ನ ಮನೆಯಿಂದ ರಾತ್ರಿ 11 ಗಂಟೆ ಸಮಯದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಪತಿ ರಘು ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಹಸಿರು ಮತ್ತು ಹಳದಿ ಬಣ್ಣದ ನೈಟಿ ಧರಿಸಿದ್ದಳು.
ಈ ಮಹಿಳೆ ಬಗ್ಗೆ ಸುಳಿವು ಸಿಕ್ಕವರು ತುಮಕೂರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
ತುಮಕೂರು; ಸೆಲ್ ಪೆಟ್ರೋಲ್ ಬಂಕ್ ಬಳಿ ಅಪರಿಚಿತ ವ್ಯಕ್ತಿ ಸಾವು
+ There are no comments
Add yours