ತುಮಕೂರು; ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆ

1 min read

 

ನವಜಾತ ಶಿಶುವಿನ ಶವ ಪತ್ತೆ; ಪೋಷಕರ ಪತ್ತೆಗೆ ಮನವಿ

Tumkurnews
ತುಮಕೂರು; ಗ್ರಾಮಾಂತರ ವ್ಯಾಪ್ತಿ ಊರುಕೆರೆ ಗ್ರಾಮದ ಕೆರೆಯಲ್ಲಿ ನವಜಾತ ಹೆಣ್ಣು ಶಿಶುವಿನ ಶವವೊಂದು ಮಾರ್ಚ್ 5ರ ಬೆಳಿಗ್ಗೆ 9 ಗಂಟೆಗೆ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು 1 ದಿನದ ಈ ನವಜಾತ ಶಿಶುವಿನ ಜನನದ ವಿಷಯವನ್ನು ಬಚ್ಚಿಡುವ ಉದ್ದೇಶದಿಂದ ನೀರಿಗೆ ಎಸೆದಿರಬಹುದು. ಮುಂದಿನ ಕ್ರಮ ಜರುಗಿಸಲು ಶಿಶುವಿನ ಸಾವಿಗೆ ಕಾರಣರಾದ ಪೋಷಕರನ್ನು ಪತ್ತೆ ಮಾಡಲು ಸಹಕರಿಸಬೇಕೆಂದು ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
ಮೃತ ಶಿಶುವು ಒಂದೂವರೆ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಮೈ ಮೇಲೆ ಬಟ್ಟೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 0816-2278000/2290832/ 2272340ಯನ್ನು ಸಂಪರ್ಕಿಸಬಹುದಾಗಿದೆ.

ವಿಧಾನಸಭೆ ಚುನಾವಣೆ; ಜಿಲ್ಲೆಯಲ್ಲಿ ಏನೇನು ಸಿದ್ಧತೆಗಳಾಗಿವೆ? ಜಿಲ್ಲಾಧಿಕಾರಿ ಮಾಹಿತಿ

About The Author

You May Also Like

More From Author

+ There are no comments

Add yours