ಲೋಕಾಯುಕ್ತ ದಾಳಿ; ಬಿಸಿಎಂ ಇಲಾಖೆ ಅಧಿಕಾರಿ ಬಂಧನ
Tumkur news
ತುಮಕೂರು; ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕಚೇರಿಗೆ ಪಡೆದಿದ್ದ ಕಾರಿನ ಬಾಡಿಗೆಯ ಬಿಲ್ ಮಂಜೂರು ಮಾಡಲು 34 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಸಿಎಂ ಇಲಾಖೆಯ ತಾಲ್ಲೂಕು ಪ್ರಭಾರ ವಿಸ್ತರಣಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಘಟನೆ ನಡೆದಿದ್ದು, ತಾಲೂಕು ಪ್ರಭಾರ ವಿಸ್ತರಣಾಧಿಕಾರಿ ಶಿವರಾಜ್ ಎಲಿಗಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಅಧಿಕಾರಿ.
ವ್ಯಕ್ತಿಯೋರ್ವರು ಬಿಸಿಎಂ ಇಲಾಖೆಗೆ ಕಾರು ಬಾಡಿಗೆಗಾಗಿ ಬಿಟ್ಟಿದ್ದರು. ಕಳೆದ ಮೂರು ತಿಂಗಳ ಕಾರಿನ ಬಾಡಿಗೆ ಬಿಲ್ ಮಂಜೂರು ಮಾಡಿಕೊಡಲು ಈ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬುಧವಾರ ಕಚೇರಿಯಲ್ಲಿ 34 ಸಾವಿರ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಡಿ.ವೈ.ಎಸ್.ಪಿ ಮಂಜುನಾಥ್ ಮತ್ತು ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಇನ್ಸ್’ಪೆಕ್ಟರ್ ಗಳಾದ ಸಲೀಂ, ರಾಮರೆಡ್ಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ಮಾರ್ಚ್ 12ರಂದು ನಿಷೇದಾಜ್ಞೆ; ಜಿಲ್ಲಾಧಿಕಾರಿ ಆದೇಶ
+ There are no comments
Add yours