ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
Tumkurnews
ತುಮಕೂರು; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಾಗಬೇಕು ಎಂದುಕೊಂಡವರಿಗೆ ಅವಕಾಶ ಇಲ್ಲಿದೆ. ಜಿಲ್ಲೆಯ ತುರುವೇಕೆರೆ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 14 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಾಸಂಖ್ಯಾತ ಮಹಿಳಾ ಆಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಾಯಕನಘಟ್ಟ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ(ಪ.ಜಾತಿ) ಹುದ್ದೆ ಹಾಗೂ ತೋವಿನಕೆರೆ, ದೊಡ್ಡೇನಹಳ್ಳಿ, ತಾವರೆಕೆರೆ, ಬುಗುಡನಹಳ್ಳಿ, ಜಡೆಯಾ, ಹಿಂಡುಮಾರನಹಳ್ಳಿ, ಜಿ.ದೊಡ್ಡೇರಿ, ಕೆ.ಕೊಪ್ಪ, ಚೌಡೇನಹಳ್ಳಿ, ರಂಗನಹಳ್ಳಿ ಭೋವಿ ಕಾಲೋನಿ, ಕುರುಬರಹಳ್ಳಿ ಬ್ಯಾಲ, ನಾಗೇಗೌಡನಬ್ಯಾಲ, ಕಳ್ಳನಕೆರೆ, ಅರೆಮಲ್ಲೇನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿಯಿರುತ್ತವೆ. ತೋವಿನಕೆರೆ, ದೊಡ್ಡೇನಹಳ್ಳಿ ಹಾಗೂ ಚೌಡೇನಹಳ್ಳಿ ಕೇಂದ್ರದ ಹುದ್ದೆಗಳು ಪ.ಜಾತಿಗೆ, ಕೆ.ಕೊಪ್ಪ ಕೇಂದ್ರದ ಹುದ್ದೆಯು ಪ.ಪಂಗಡಕ್ಕೆ, ನಾಗೇಗೌಡನಬ್ಯಾಲ ಕೇಂದ್ರದ ಹುದ್ದೆಯು ಅಲ್ಪಸಂಖ್ಯಾತ ವರ್ಗಕ್ಕೆ, ಉಳಿದ ಕೇಂದ್ರಗಳ ಸಹಾಯಕಿ ಹುದ್ದೆಗಳನ್ನು ಇತರೆ ವರ್ಗಕ್ಕೆ ಮೀಸಲಿಡಲಾಗಿವೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಏ.5ರೊಳಗಾಗಿ ತುರುವೇಕೆರೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
+ There are no comments
Add yours