ಮಿಶ್ರತಳಿ ಹಸು, ಎಮ್ಮೆ ವಿತರಣೆ; ಅರ್ಜಿ ಆಹ್ವಾನ

1 min read

ಮಿಶ್ರತಳಿ ಹಸು, ಎಮ್ಮೆ ವಿತರಣೆ: ಅರ್ಜಿ ಆಹ್ವಾನ
Tumkurnews
ತುಮಕೂರು; ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಒಂದು ಮಿಶ್ರ ತಳಿ ಹಸು, ಎಮ್ಮೆ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪ್ರತಿ ಫಲಾನುಭವಿಗೆ ಒಂದು ಮಿಶ್ರ ತಳಿ ಹಸು, ಎಮ್ಮೆಯನ್ನು ರೂ.62,000 -ಘಟಕ ಮೊತ್ತದಲ್ಲಿ(ಜಾನುವಾರು ಮೌಲ್ಯ ಹಾಗೂ ಜಾನುವಾರು ಸಾಗಾಣಿಕೆ ಮೊತ್ತ ಒಳಗೊಂಡಿರುತ್ತದೆ.) ವಿತರಣೆ ಮಾಡಲಾಗುವುದು. ಈ ಯೋಜನೆಯಲ್ಲಿ ಪರಿಶಿಷ್ಟಜಾತಿ, ಪಂಗಡದ ಫಲಾನುಭವಿಗಳಿಗೆ ಶೇ.33.33 ರಂತೆ ಹಾಗೂ ಇತರೆ ಫಲಾನುಭವಿಗಳಿಗೆ ಶೇ.25 ರಂತೆ ಸಹಾಯಧನದೊಂದಿಗೆ ತುಮಕೂರು ಜಿಲ್ಲೆಗೆ ಇತರೆ ಜಾತಿ 124 ಫಲಾನುಭವಿಗಳು, ಪರಿಶಿಷ್ಟಜಾತಿ 22 ಫಲಾನುಭವಿಗಳು ಮತ್ತು ಪರಿಶಿಷ್ಟ ಪಂಗಡ 9 ಫಲಾನುಭವಿಗಳಂತೆ ಗುರಿ ನಿಗದಿಪಡಿಸಲಾಗಿದ್ದು ಯೋಜನೆ ಅನುಷ್ಠಾನಗೊಳಿಸಲಾಗುವುದು. ಅರ್ಜಿದಾರರು ಗುರುತಿನ ಸಂಖ್ಯೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು(ಪ್ರಮಾಣ ಪತ್ರದಲ್ಲಿ ಆರ್.ಡಿ. ಸಂಖ್ಯೆ ಇರಬೇಕು). ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ.33.3 ಅಲ್ಪಸಂಖ್ಯಾತರಿಗೆ ಶೇ.15 ಮಿಸಲಾತಿ, ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಲಗತ್ತಿಸುವುದು(ಶೇ.3ರಂತೆ ಮಿಸಲಾತಿ ಆದ್ಯತೆ ನೀಡಲಾಗುವುದು).
ಭರ್ತಿ ಮಾಡಿದ ಅರ್ಜಿಗಳನ್ನು 2023ರ ಜ.10ರೊಳಗಾಗಿ ಸಲ್ಲಿಸಬಹುದಾಗಿದ್ದು, ಜಿಲ್ಲೆಯ ಪಶುಪಾಲಕರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕುಗಳ ಹತ್ತಿರದ ಪಶು ವೈದ್ಯ ಸಂಸ್ದೆಗಳನ್ನು ಸಂಪರ್ಕಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

About The Author

You May Also Like

More From Author

+ There are no comments

Add yours