ಅಡಕೆ, ಮಿಡಿಸೌತೆ ಬೆಳೆಗೆ ಆತಂಕ
ಬೆಂಗಳೂರು; ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಉಂಟಾಗಿರುವ ಹಿನ್ನೆಲೆಯಲ್ಲಿ ಡಿ.12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ರೈತರಿಗೆ ವಿವಿಧ ಪಶುಪಾಲನಾ ಉಚಿತ ತರಬೇತಿ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಬಳಿಕ ಚಂಡಮಾರುತ ಉಂಟಾಗಿದ್ದು, ಗುರುವಾರ ತಮಿಳುನಾಡು ಮತ್ತು ಪುದುಚೇರಿ ತೀರಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿದೆ.
ಈ ವಾತಾವರಣ ಡಿ.12ರವರೆಗೆ ಮುಂದುವರಿಯಲಿದ್ದು, ಡಿಸೆಂಬರ್ 10ರಿಂದ 12ರವರೆಗೆ ಕರ್ನಾಟಕದ ಕೋಲಾರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕೊಬ್ಬರಿಗೆ 20 ಸಾವಿರ ಬೆಲೆ ನಿಗದಿಗೆ ಒತ್ತಾಯ; ಡಿ.19ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ
ಅಡಕೆ ಬೆಳೆಗಾರರು ಕಂಗಾಲು; ವಾಯುಭಾರ ಕುಸಿತದ ನೇರ ಅಡ್ಡ ಪರಿಣಾಮ ಅಡಕೆ ಕುಯ್ಲಿನ ಮೇಲೆ ಉಂಟಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಅಡಕೆ ಕುಯ್ಲಿನ ಸಮಯವಾಗಿದ್ದು, ತುಮಕೂರು, ಶಿವಮೊಗ್ಗ ಸೇರಿದಂತೆ ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ಬೆಳೆಗಾರರು ಅಡಕೆ ಕುಯ್ಲು ಮಾಡುತ್ತಿದ್ದಾರೆ. ಈಗ ಬೀಳುತ್ತಿರುವ ಮಳೆಯಿಂದಾಗಿ ಕೊಯ್ಲಿಗೆ ಅಡ್ಡಿಯಾಗುತ್ತಿದೆ. ಮುಖ್ಯವಾಗಿ ಬೇಯಿಸಿದ ಅಡಕೆಯನ್ನು ಒಣಗಿಸಲು ತೊಂದರೆಯಾಗುತ್ತಿದೆ. ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರಿಗೆ ವಾಯುಭಾರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುದುಡಿದ ಮಿಡಿ ಸೌತೆ; ತುಮಕೂರು ಜಿಲ್ಲೆಯ ಗುಬ್ಬಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಮಿಡಿಸೌತೆ ನಾಟಿ ಮಾಡಿದ್ದಾರೆ. ಮಳೆಯಿಂದಾಗಿ ಎಲೆಗಳು ಮುದುಡಿಹೋಗುತ್ತಿವೆ. ಮೂರ್ನಾಲ್ಕು ದಿನ ಮಳೆ ಮುಂದುವರಿದರೆ ಮಿಡಿಸೌತೆ ಇಳುವರಿ ಕುಸಿಯುವ ಭೀತಿ ಎದುರಾಗಿದೆ.
ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ತುಮಕೂರಿನಲ್ಲಿ ಮಳೆ; ವಾಯುಭಾರ ಕುಸಿತದ ಪರಿಣಾಮವಾಗಿ ತುಮಕೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಶುಕ್ರವಾರ ಮೋಡಕವಿದ ವಾತಾವರಣ ಸಂಜೆ ವೇಳೆಗೆ ಮಳೆಗೆ ಪರಿವರ್ತನೆಯಾಗಿದ್ದು, ಶನಿವಾರ ಮುಂಜಾನೆಯಿಂದಲೇ ಹಲವೆಡೆ ತುಂತುರು ಮಳೆಯಾಗಿದೆ.
+ There are no comments
Add yours