ಪಂಚರತ್ನ ಯಾತ್ರೆಗೆ ತೆರೆ ಎಳೆದ ಎಚ್.ಡಿ ಕುಮಾರಸ್ವಾಮಿ; HDK ಕೊಟ್ಟ ಕಾರಣಗಳೇನು?

1 min read

Tumkurnews
ತುಮಕೂರು; ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆಗೆ ಮಂಗಳವಾರ ತೆರೆ ಬಿದ್ದಿದೆ. ಮೊದಲ ಹಂತದ ಪಂಚರತ್ನ ಯಾತ್ರೆಗೆ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಮಂಗಳವಾರ ತೆರೆ ಎಳೆದರು.
ಈ ಕುರಿತು ಗುಬ್ಬಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಚ್ 24ರ ವರೆಗೆ ಯಾತ್ರೆ ನಡೆಯಲಿದೆ. ಇಂದು ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ಹಂತದ ಯಾತ್ರೆಗೆ ತೆರೆ ಎಳೆಯುತ್ತಿದ್ದೇನೆ. ಕಾರಣ, ನಾಳೆ ಕೆ.ಜಿ.ಎಫ್’ನಲ್ಲಿ ಬೃಹತ್ ಸಭೆ ಇಟ್ಟುಕೊಂಡಿದ್ದೇವೆ. ನಾಡಿದ್ದು ಅಫಜಲಪುರದಲ್ಲಿ ನಮ್ಮ ‌ಪಕ್ಷದ ಅಭ್ಯರ್ಥಿ ಕಳೆದ ಒಂದೂವರೆ ತಿಂಗಳಿನಿಂದ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದರು. ಅದರ ಸಮಾರೋಪ ಸಮಾರಂಭವನ್ನು ಡಿ.8ರಂದು ಹಮ್ಮಿಕೊಂಡಿದ್ದಾರೆ. ಮತ್ತು ಡಿ.9ರಂದು ಶಿರಹಟ್ಟಿಯಲ್ಲಿ ಸೇವಾಲಾಲ್ ಸ್ವಾಮಿಗಳು ಅವರ ಒಂದು ಕಾರ್ಯಕ್ರಮಕ್ಕೆ ಬರಬೇಕೆಂದು ಹಠ ಮಾಡಿದ್ದಾರೆ. ಆ ಕಾರ್ಯಗಳಲ್ಲಿ ಭಾಗವಹಿಸಬೇಕಿರುವುದರಿಂದ ಈ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದೇನೆ. ಡಿ.11ರಿಂದ ಚಿಕ್ಕನಾಯಕನಹಳ್ಳಿಯಿಂದ ನಮ್ಮ ಯಾತ್ರೆ ಪುನಃ ಮುಂದುವರೆಯಲಿದೆ ಎಂದು ತಿಳಿಸಿದರು.

ಪಂಚರತ್ನ ಯಾತ್ರೆಗೆ ಕಲ್ಪತರು ನಾಡಿನಲ್ಲಿ ಅಭೂತಪೂರ್ವ ಸ್ವಾಗತ; HDK ನೀಡಿದ‌ ಭರವಸೆಗಳೇನು? ಇಲ್ಲಿದೆ ನೋಡಿ

About The Author

You May Also Like

More From Author

+ There are no comments

Add yours