ಸ್ವಯಂ ಸೇವಾ ಗೃಹ ರಕ್ಷಕ, ಗೃಹ ರಕ್ಷಕಿಯರ ಹುದ್ದೆ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

1 min read

 

ಸ್ವಯಂ ಸೇವಾ ಗೃಹ ರಕ್ಷಕ, ಗೃಹ ರಕ್ಷಕಿಯರ ಹುದ್ದೆ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
Tumkurnews
ತುಮಕೂರು; ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಾ ಗೃಹರಕ್ಷಕ, ಗೃಹರಕ್ಷಕಿಯರ ಹುದ್ದೆಗಳನ್ನು ಆಯ್ಕೆ ಮಾಡಲು ಅರ್ಜಿ ಸಲ್ಲಿಸುವ ಅವಧಿಯನ್ನು ಡಿ.5ರವರೆಗೆ ವಿಸ್ತರಿಸಲಾಗಿದೆ.
ತುಮಕೂರು ಘಟಕದ- 12, ಕೊರಟಗೆರೆ-15, ಮಧುಗಿರಿ-05, ಪಾವಗಡ-14, ಶಿರಾ-05. ಚಿಕ್ಕನಾಯಕನಹಳ್ಳಿ-11, ತಿಪಟೂರು-11, ತುರುವೇಕೆರೆ-09, ಕುಣಿಗಲ್-09, ಗುಬ್ಬಿ-10. ಊರ್ಡಿಗೆರೆ-07, ನೊಣವಿನಕೆರೆ-05, ಹೊನ್ನವಳ್ಳಿ-10, ಅಮೃತೂರು-06, ಮಿಡಿಗೇಶಿ-15, ತಾವರೆಕೆರೆ-11, ಕಳ್ಳಂಬೆಳ್ಳ-13, ವೈ.ಎನ್, ಹೊಸಕೋಟೆ-14. ಒಟ್ಟು 182 ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 5ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸೇರಬಯಸುವ ಅಭ್ಯರ್ಥಿಗಳೇ ಖುದ್ದಾಗಿ ಕಚೇರಿಗೆ ಮೂಲ ದಾಖಲಾತಿಗಳನ್ನು ತೋರಿಸಿ ಅರ್ಜಿಯನ್ನು ಉಚಿತವಾಗಿ ಪಡೆಯುವುದು. ಕಂಪ್ಯೂಟರ್ ಹಾಗೂ ಡ್ರೈವಿಂಗ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುವುದು ಹಾಗೂ ಇದು ಖಾಯಂ ನೌಕರಿಯಾಗಿರುವುದಿಲ್ಲ.

ಪ್ರೇಯಸಿಯನ್ನು ಕೊಂದು‌ ಶೌಚಗುಂಡಿಯಲ್ಲಿ ಹೂತು ಹಾಕಿದ್ದ ಪ್ರಿಯಕರ; ಜೀವಾವಧಿ‌ ಶಿಕ್ಷೆ ನೀಡಿದ ಕೋರ್ಟ್
ಅರ್ಜಿಯೊಂದಿಗೆ ವಿದ್ಯಾರ್ಹತೆ 10ನೇ ತರಗತಿ ಮೇಲ್ಪಟ್ಟು (ಅಂಕಪಟ್ಟಿ, ಟಿ.ಸಿ.), ಜನ್ಮ ದಿನಾಂಕ ದೃಢೀಕರಣ (ಟಿ.ಸಿ.), ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಕಡ್ಡಾಯ (ಖಾತೆ ಚಾಲ್ತಿಯಲ್ಲಿರಬೇಕು), ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರ, ಅಭ್ಯರ್ಥಿಯ ವಾಸ ಸ್ಥಳ ಪುರಾವೆ, ಪೊಲೀಸ್ ಇಲಾಖೆಯಿಂದ ನೀಡಲಾಗುವ ಗುಣ-ನಡತೆ ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸಬೇಕು.

SSLC ಆಗಿದ್ರೆ ಸಾಕು; ಗೃಹ ರಕ್ಷಕದಳ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ ಕೆ.ಪ್ರಕಾಶ್ ಪ್ರ.ದ.ಸ. ಗೃಹರಕ್ಷಕದಳ, ತುಮಕೂರು ಜಿಲ್ಲೆ ಮೊಬೈಲ್ ಸಂಖ್ಯೆ: 9480559257, ಹೆಚ್.ಸಿ. ಶ್ರೀನಿವಾಸ-6361381858 ಮತ್ತು ಕೆ.ಟಿ. ಹನುಮಂತಯ್ಯ-9972111185, ಗೃಹರಕ್ಷಕದಳ ಕಚೇರಿ ದೂರವಾಣಿ ಸಂಖ್ಯೆ: 0816-2009116ನ್ನು ಸಂಪರ್ಕಿಸುವಂತೆ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ದಿಮೆ ಸ್ಥಾಪನೆಗೆ 20 ಲಕ್ಷ ಸಾಲ, 10 ಲಕ್ಷ ಸಬ್ಸಿಡಿ; ಇಂದೇ ಅರ್ಜಿ ಸಲ್ಲಿಸಿ

About The Author

You May Also Like

More From Author

+ There are no comments

Add yours