ತುಮಕೂರು; ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

1 min read

ಅಪರಿಚಿತ ಶವ ಪತ್ತೆ
Tumkurnews
ತುಮಕೂರು; ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕೋನಹಳ್ಳಿ ಕೆರೆಯಲ್ಲಿ ನವೆಂಬರ್ 25ರಂದು ಯಾವುದೋ ಅಪರಿಚಿತ ಹೆಂಗಸಿನ ಶವ ತೇಲುತ್ತಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತೆ ಸುಮಾರು 70 ವರ್ಷ ವಯಸ್ಸಾಗಿದ್ದು, ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತೆಯ ಮೈಮೇಲೆ ಹಸಿರು ಬಣ್ಣದ ರವಿಕೆ, ಹೂಗಳ ಚಿತ್ರವಿರುವ ಪಿಂಕ್ ಸೀರೆ ಇರುತ್ತದೆ.
ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 0816-2278000, 2272340, 2275301/ 2242006, ಮೊ.ಸಂ. 9480802900/ 20/ 31/ 49ನ್ನು ಸಂಪರ್ಕಿಸುವಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours