Tumkurnews
ತುಮಕೂರು; ಭಾರೀ ಮಳೆಯಿಂದಾಗಿ ತಾಲ್ಲೂಕಿನ ಹೆಬ್ಬಾಕ ಕೆರೆ ತುಂಬಿಕೊಂಡಿದ್ದು, ಇಂದು ಕೆರೆ ಕೋಡಿ ಒಡೆದು ನೀರನ್ನು ಹೊರಗೆ ಬಿಡಲಾಗಿದೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು- ಪೂನಾ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ.
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕೆರೆಕಟ್ಟೆಗಳು ತುಂಬಿ, ಕೋಡಿ ಬಿದ್ದ ನೀರು ಊರೊಳಗೆ ಬರುತ್ತಿದೆ. ತಾಲ್ಲೂಕಿನ ಹೆಬ್ಬಾಕ ಕೆರೆ ಕೂಡ ತುಂಬಿ ಕೋಡಿ ಬಿದ್ದಿದ್ದು, ನೀರಿನ ಒತ್ತಡಕ್ಕೆ ಕೆರೆಯೇ ಒಡೆಯುವ ಭೀತಿ ಎದುರಾಗಿತ್ತು. ಕೆರೆ ಒಡೆದರೆ ಹೆಬ್ಬಾಕ ಗ್ರಾಮ ಜಲಾವೃತವಾಗುವ ಆತಂಕವಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ವತಃ ಜಿಲ್ಲಾಡಳಿತ ಕೆರೆಯ ಕೋಡಿ ಒಡೆದು ನೀರನ್ನು ಹೊರಗೆ ಬಿಟ್ಟಿದೆ.
ತಪ್ಪದ ಅನಾಹುತ; ಕೆರೆ ಒಡೆಯುತ್ತಿದ್ದಂತೆ ರಭಸವಾಗಿ ಹೊರಗೆ ಹರಿದ ನೀರು ಸಮೀಪದ ಜೈನ್ ಪಬ್ಲಿಕ್ ಶಾಲೆ ಆವರಣಕ್ಕೆ ನುಗ್ಗಿದ್ದು, ಶಾಲೆಯ ಆವರಣ ಸಂಪೂರ್ಣ ಜಲಾವೃತವಾಗಿದೆ.
ಹೈವೇ ಬಂದ್; ಹೆಬ್ಬಾಕ ಕೆರೆ ನೀರು ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು-ಪೂನಾ ರಸ್ತೆಗೆ ಬಂದು ನಿಂತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಸುಮಾರು 4 ಕಿಮೀವರೆಗೆ ಟ್ರಾಫಿಕ್ ಜಾನ್ ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಳೆ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಿದ್ದು, ಜನತೆ ಹೈರಾಣಾಗಿದ್ದಾರೆ.
ಚಾಲಕನ ಅಜಾಗರೂಕತೆಯಿಂದ ನದಿಯಲ್ಲಿ ಸಿಕ್ಕಿಕೊಂಡ ಬಸ್; ಮೈ ಜುಮ್ಮೆನ್ನಿಸುವ ವಿಡಿಯೋ
+ There are no comments
Add yours