ಸಾವರ್ಕರ್ ಅಧ್ಯಯನ ಪೀಠಕ್ಕೆ ವಿರೋಧ; ತುಮಕೂರು ವಿವಿಗೆ ಪ್ರತಿಭಟನೆಯ ಎಚ್ಚರಿಕೆ

1 min read

 

Tumkurnews
ತುಮಕೂರು; ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿ.ಡಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು, ಅಧ್ಯಯನ ಪೀಠ ಸ್ಥಾಪಿಸದಂತೆ ವಿವಿಧ ಸಂಘಟನೆಗಳ ಮುಖಂಡರು ವಿವಿ ಕುಲಪತಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ ಕೊಟ್ಟ ಶಂಕರ್, ಸಾವರ್ಕರ್ ಪೋಟೋವನ್ನು ಅವರ ಅಭಿಮಾನಿಗಳು ಅವರವರ ಮನೆಯಲ್ಲಿ ಹಾಕಿಕೊಳ್ಳಲಿ, ಅದರ ಹೊರತಾಗಿ ವಿವಿಯಲ್ಲಿ ಪೀಠ ಸ್ಥಾಪನೆ ಬೇಡ ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ವಿವಿ ಯಲ್ಲಿ ಸಾವರ್ಕರ್ ಪೀಠ ಮಾಡುತ್ತೇವೆ ಎಂದು ವಿಶ್ವವಿದ್ಯಾನಿಲಯವನ್ನು ರಾಜಕಾರಣದ ಕೇಂದ್ರ ಮಾಡಲು ಹೊರಟಿರುವ ವಿವಿಯ ನಡೆ ನಿಜಕ್ಕೂ ನಾಚಿಕೆ ತರುವಂತದ್ದು. ವಿವಿಯಲ್ಲಿ ಈಗಾಗಲೇ 16 ಅಧ್ಯಯನ ಪೀಠಗಳಿವೆ. ಅವುಗಳಿಗೇ ಹಣ ಇಲ್ಲ. ಪೀಠೋಪಕರಣಗಳಿಲ್ಲ, ಇನ್ನೂ ಹೊಸ ಕ್ಯಾಂಪಸ್ ಕಟ್ಟಲು ಆಗಲಿಲ್ಲ. ಇಂತಹ ಸಂಧರ್ಭದಲ್ಲಿ ರಾಜಕೀಯ ತೇವಲಿಗೆ ಪೀಠ ಮಾಡುತ್ತಿರುವುದು ವಿಶ್ವವಿದ್ಯಾನಿಲಯದ ಭೌದ್ಧಿಕ ದಾರಿದ್ರ್ಯ. ಹಾಗಾಗಿ ಪೀಠ ಸ್ಥಾಪನೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರಗಳು ಮನವಿ ಮಾಡಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.

ಚಿತ್ರ; ಸಾವರ್ಕರ್ ಅಧ್ಯಯನ ಪೀಠ ವಿರೋಧಿಸಿ ತುಮಕೂರು ವಿವಿಗೆ ಸೋಮವಾರ ಪ್ರಗತಿ ಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

About The Author

You May Also Like

More From Author

+ There are no comments

Add yours