Tumkurnews
ಬೆಂಗಳೂರು; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಿ ಆದೇಶಿಸಿದೆ.
ಪ್ರಸ್ತುತ ಎಲ್ಲಾ ವರ್ಗದ ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪರೀಕ್ಷೆಗಳು, ತರಗತಿಗಳು ಮುಂದುವರೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಂದ ನಿಗದಿತ ಮೊತ್ತವನ್ನು ಪಾವತಿಸಿಕೊಂಡು ರಶೀದಿ ನೀಡಿ, ವಿದ್ಯಾರ್ಥಿಗಳು ರಶೀದಿ ಮತ್ತು ಹಳೇಯ ಪಾಸ್ ಎರಡನ್ನೂ ತೋರಿಸಿ ಆಗಸ್ಟ್ 2022ರ ಮಾಹೆಯವರೆಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ ಪ್ರಸ್ತುತ ಕೊನೆಯ, ಅಂತಿಮ ಸೆಮಿಸ್ಟರ್’ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇನ್ನೂ ಮುಗಿಯದಿರುವುದನ್ನು ಗಮನಿಸಿ ಹಾಗೂ ಸದರಿ ವಿದ್ಯಾರ್ಥಿಗಳ ಬೇಡಿಕೆಯನ್ನು, ವೇಳಾಪಟ್ಟಿಯನ್ನು ಪರಿಗಣಿಸಿ, ಆಗಸ್ಟ್ 2022ರವರೆಗೆ ನವೀಕರಿಸಲಾಗಿದ್ದ ಅಂತಿಮ ವರ್ಷದ ಕೊನೆಯ ಸೆಮಿಸ್ಟರ್’ನಲ್ಲಿ ಅಭ್ಯಸಿಸುತ್ತಿರುವ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಕಾನೂನು, ಇತರೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಪಾಸುಗಳನ್ನು ಮಾತ್ರ ಅಂತಿಮ ಪರೀಕ್ಷೆ ಮುಗಿಯುವವರೆಗೆ ಅಂದರೆ ಅಕ್ಟೋಬರ್ 2022ರ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ಈ ವಿದ್ಯಾರ್ಥಿಗಳು ಹಳೇಯ ಪಾಸ್ ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಇದರ ಹೊರತಾಗಿ ಉಳಿದ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಿ ಹೊಸ ಪಾಸ್ ಪಡೆಯಬಹುದಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶಿಸಿದ್ದಾರೆ.
ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ
+ There are no comments
Add yours