ಸಾಲ ಸೌಲಭ್ಯ; ಅವಧಿ ವಿಸ್ತರಣೆ
Tumkurnews
ತುಮಕೂರು; ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಗೆ ಸಾಲಸೌಲಭ್ಯ ಪಡೆಯಲು ಆ.31, 2022ರವರೆಗೆ ಅವಧಿ ವಿಸ್ತರಿಸಲಾಗಿದೆ.
ಸ್ವಯಂ ಉದ್ಯೋಗ (ನೇರಸಾಲ); ತರಕಾರಿ, ಹಣ್ಣು ಮಾರಾಟ ಮತ್ತು ಹಸು, ಎಮ್ಮೆ, ಕುರಿ, ಹಂದಿ, ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸೌಲಭ್ಯ ಪಡೆಯಲು ನಿಗಮದಿಂದ ನೇರವಾಗಿ ಮಂಜೂರು ಮಾಡಲಾಗುವುದು.
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ); ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಿ ತೊಡಗಿಕೊಂಡು ಆದಾಯ ಗಳಿಸಲು ಈ ಯೋಜನೆಯನ್ನು ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು. ಸಹಾಯಧನವನ್ನು ಮಂಜೂರು ಮಾಡಲಾಗುವುದು.
ಮೈಕ್ರೋ ಕ್ರೆಡಿಟ್ (ಪ್ರೇರಣಾ); ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವ ಸಹಾಯ ಸಂಘಗಳು ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ 10 ಮಹಿಳಾ ಸದಸ್ಯರಿರುವ ಮಹಿಳಾ ಸ್ವ ಸಹಾಯ ಸಂಘ, ಗುಂಪುಗಳಿಗೆ ಒಟ್ಟು ಘಟಕದ ವೆಚ್ಚ ರೂ.2.50 ಇದ್ದು, ಇದರಲ್ಲಿ ಸಹಾಯಧನ, ಸಾಲದ ಮೊತ್ತವು ಇರುತ್ತದೆ.
ಗಂಗಾಕಲ್ಯಾಣ ಯೋಜನೆ; ಈ ಯೋಜನೆಯಡಿ ಸಣ್ಣ, ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ ಜಮಿನಿಗೆ ಕೊಳವೆಬಾವಿ ಸೌಲಭ್ಯ ಪಡೆಯಲು ಘಟಕದ ಒಟ್ಟು ರೂ.3.50/4.00 ರವರೆಗೆ ಇರುತ್ತದೆ.
ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಆಯ್ಕೆ ಮಾಡುವ ಯೋಜನೆಗಳಿಗೆ ಪ್ರತ್ಯೇಕವಾಗಿ ಯೋಜನೆಗೆ ಅನುಗುಣವಾಗಿ ಸೌಲಭ್ಯ ಪಡೆಯಲು ಇಚ್ಚಿಸಿದ್ದಲ್ಲಿ, ಸುವಿಧಾ ತಂತ್ರಾಂಶದ ಲಿಂಕ್ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸುವುದು. ನಂತರ ಸರ್ಕಾರದ ಸಾಂಸ್ಥಿಕ ಕೋಟಾ, ಮಂಡಳಿ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಚಿಸಿದ್ದಲ್ಲಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸುವಿಧಾ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಿಕೊಂಡು ಸ್ವೀಕೃತಿಗಳನ್ನು ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಆಫ್‍ಲೈನ್ ಮುಖಾಂತರ ಬರುವ ಅರ್ಜಿಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ.
ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿಜಾಂಬವ ಅಭಿವೃಧ್ದಿ ನಿಗಮ, ಆಯಾ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಇವರನ್ನು ಸಂಪರ್ಕಿಸಬಹುದು. ಅಥವಾ ನಿಗಮದ ಜಾಲತಾಣ https://suvidha.karnataka.gov.in ಅನ್ನು ಬಳಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
+ There are no comments
Add yours