ಅರ್ಚಕರ ಮತಾಂತರದ ಹಿಂದೆ ಜೆಡಿಎಸ್?; ದೂರು ದಾಖಲಾಗುವ ಸಾಧ್ಯತೆ

1 min read

 

Tumkurnews
ತುಮಕೂರು; ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ಎಚ್.ಆರ್ ಚಂದ್ರಶೇಖರಯ್ಯ ಅವರು ಮುಸ್ಲಿಂ ‌ಧರ್ಮಕ್ಕೆ ಮತಾಂತರಗೊಂಡ ಪ್ರಕರಣದ ಹಿಂದೆ ಜೆಡಿಎಸ್ ಮುಖಂಡರ ಹೆಸರು ಹೇಳಿ ಬಂದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಹೌದು, ಕಳೆದ 25 ವರ್ಷಗಳಿಂದ ಓಂಕಾರೇಶ್ವರ ದೇವಾಲಯದ ಅರ್ಚಕರಾಗಿದ್ದ ವೀರಶೈವ ಲಿಂಗಾಯತ ಧರ್ಮದ ಎಚ್.ಆರ್ ಚಂದ್ರಶೇಖರಯ್ಯ ಅವರು ಇದೇ ಆಗಸ್ಟ್ 18ರಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು.
ಈ ವಿಷಯ ತಿಳಿಯುತ್ತದೆ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಚಂದ್ರಶೇಖರಯ್ಯ ಅವರ ಮನವೊಲಿಸಿ ಮರಳಿ ಹಿಂದೂ‌ ಧರ್ಮಕ್ಕೆ ಕರೆತಂದಿದ್ದರು. ಇದೀಗ ಎಚ್.ಆರ್ ಚಂದ್ರಶೇಖರಯ್ಯ ಮಾತೃ ಧರ್ಮಕ್ಕೆ ಮರಳಿ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಪ್ರಕರಣದ ಹಿಂದೆ ಜೆಡಿಎಸ್ ಕರಿನೆರಳು ಇರುವ ಆರೋಪ ಕೇಳಿ ಬಂದಿದೆ.

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಅರ್ಚಕ!
ಬಲವಂತದ ಮತಾಂತರ; ಎಚ್.ಆರ್ ಚಂದ್ರಶೇಖರಯ್ಯ ಅವರ ವೈಯಕ್ತಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಅವರಿಗೆ ನೆರವಾಗುವ ನೆಪದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದ ಗ್ರಾಮ‌ ಪಂಚಾಯತಿ ಸದಸ್ಯನೋರ್ವ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ‌ಮತಾಂತರಗೊಳಿಸಿರುವ ಆರೋಪ ಕೇಳಿ ಬಂದಿದೆ.
ಗ್ರಾಮ ಪಂಚಾಯತಿ ‌ಸದಸ್ಯ ತನ್ವೀರ್ ಎಂಬಾತನ ವಿರುದ್ಧ ಚಂದ್ರಶೇಖರಯ್ಯ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿದ ಆರೋಪ ಕೇಳಿ ಬಂದಿದ್ದು, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌರಿಶಂಕರ್ ಆಪ್ತ; ಸದರಿ ಗ್ರಾಪಂ ಸದಸ್ಯ ತನ್ವಿರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈತ ಗ್ರಾಮಾಂತರ ಜೆ.ಡಿ.ಎಸ್ ಶಾಸಕ ಡಿ.ಸಿ ಗೌರಿಶಂಕರ್ ಆಪ್ತ ಎಂಬ ಆರೋಪ ಕೇಳಿಬಂದಿದೆ. ಆದರೆ ‌ಈ ಆರೋಪವನ್ನು ತಳ್ಳಿ ಹಾಕಿರುವ ಶಾಸಕ ಡಿ.ಸಿ ಗೌರಿಶಂಕರ್, ‘ತಮಗೂ ಈ ಮತಾಂತರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಮಾಡಲು ಕೆಲಸವಿಲ್ಲದ, ಸಾಮಾಜಿಕ ಜವಬ್ದಾರಿ ‌ಇಲ್ಲದವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತಾಂತರಗೊಂಡ 24 ಗಂಟೆಗಳಲ್ಲೇ ಮರಳಿ ಮಾತೃ ಧರ್ಮಕ್ಕೆ ಬಂದ ಅರ್ಚಕ!
ದೂರು ಸಾಧ್ಯತೆ; ಇದೆಲ್ಲದರ ನಡುವೆ ತುಮಕೂರಿನಲ್ಲಿ ಬಲವಂತದ ಮತಾಂತರ ನಡೆಯುತ್ತಿರುವ ಬಗ್ಗೆ ಹಾಗೂ ಎಚ್.ಆರ್ ಚಂದ್ರಶೇಖರಯ್ಯ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಆರೋಪ ಎದುರಿಸುತ್ತಿರುವ ತನ್ವಿರ್ ವಿರುದ್ಧ ದೂರು ದಾಖಲಾಗುವ ಸಾಧ್ಯತೆ ಇದೆ.
ಮಂತ್ರಾಕ್ಷತೆ ನೀಡಿ ಸ್ವಾಗತ; ಇಸ್ಲಾಂಗೆ ತೆರಳಿದ್ದ ಎಚ್.ಆರ್ ಚಂದ್ರಶೇಖರಯ್ಯ ಅಲಿಯಾಸ್ ‌ಮಂಜುನಾಥ್ ಅವರು ಇಸ್ಲಾಂ ಧರ್ಮದ ನಿಯಮಗಳಂತೆ ಮುಂಜಿ ಮಾಡಿಸಿಕೊಳ್ಳಲು ನಿರಾಕರಿಸಿ ಮರಳಿ ಮಾತೃ ಧರ್ಮಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ತುಮಕೂರಿನ ಚಿಕ್ಕಪೇಟೆಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ವ್ಯಾಸರಾಯ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀ ಪಾದಂಗಳವರು ಮಂತ್ರಾಕ್ಷತೆ ನೀಡಿ ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು.

(ಅರ್ಚಕರ ಹೇಳಿಕೆ; ವಿಡಿಯೋ)

About The Author

You May Also Like

More From Author

+ There are no comments

Add yours