ಸೌದಿಗೆ ಹೋಗಿ ಸೆಟಲ್ ಆದ ಪತ್ನಿ; ಮಕ್ಕಳೊಂದಿಗೆ ವಿಷ ಸೇವಿಸಿ ಪತಿ ಆತ್ಮಹತ್ಯೆ

1 min read

Tumkurnews
ತುಮಕೂರು; ಪತ್ನಿ ವಿದೇಶಕ್ಕೆ ತೆರಳಿದ್ದರಿಂದ ಬೇಸತ್ತು ಪತಿ, ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಪಿ.ಎಚ್ ಕಾಲೋನಿಯ ನಿವಾಸಿ ಸಮಿವುಲ್ಲಾ ಮೃತ ದುರ್ದೈವಿ, ಈತನೊಂದಿಗೆ ವಿಷ ಸೇವಿಸಿದ್ದ ಮೂವರು ಮಕ್ಕಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸಮಿವುಲ್ಲಾನ ಪತ್ನಿ ಸಾಹೆರಾಬಾನು ಪತಿಯ ವಿರೋಧದ ನಡುವೆಯೂ ಮನೆ ಕೆಲಸಕ್ಕೆಂದು ಸೌದಿ ಅರೆಬಿಯಾಕ್ಕೆ ತೆರಳಿದ್ದಳು. ವಿದೇಶಕ್ಕೆ ತೆರಳಿದ ಬಳಿಕ ಪತ್ನಿಯ ವರ್ತನೆ ಬದಲಾಗಿತ್ತು. ಮನೆ ಕೆಲಸಕ್ಕೆಂದು ಹೋಗಿದ್ದ ಪತ್ನಿ ಸಾಹೆರಾಬಾನು ವಾಪಸು ಭಾರತಕ್ಕೆ ಬರಲು ನಿರಾಕರಿಸಿದ್ದಳು. ಸಾಲದಕ್ಕೆ ಪತಿ ಕರೆ ಮಾಡಿದಾಗಲೆಲ್ಲಾ ಕರೆ ಸ್ವೀಕರಿಸುತ್ತಿರಲಿಲ್ಲ. ಅಲ್ಲದೇ ಮೋಜು ಮಸ್ತಿ ಮಾಡುತ್ತ ಪತಿಗೆ ವಿಡಿಯೋ ಕಾಲ್ ಮಾಡಿ ರೇಗಿಸುತ್ತಿದ್ದಳು ಎನ್ನಲಾಗಿದೆ.
ಇದರಿಂದಾಗಿ ಬೇಸತ್ತ ಪತಿ, ಹಲವು ಬಾರಿ ಕರೆದರೂ ಪತ್ನಿ ವಾಪಾಸು ಬರುತ್ತಿಲ್ಲವೆಂದು ನೊಂದು ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ್ದಾನೆ. ಆಸ್ಪತ್ರೆಗೆ ಸಾಗಿಸುವ ವೇಳೆ ಸಮಿವುಲ್ಲಾ ಮೃತ ಪಟ್ಟಿದ್ದು, ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಮಕ್ಕಳ ಕಣ್ಣೀರಿಗೂ ಕರಗಲಿಲ್ಲ; ವಿಷ ಸೇವನೆಗೂ ಮುನ್ನ ಮಕ್ಕಳು ಸಾಹೆರಾಬಾನುಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ತಮ್ಮೊಂದಿಗೆ ಮಾತನಾಡುವಂತೆ ಗೋಗರೆದಿದ್ದಾರೆ. ಆದರೆ ತಾಯಿಯ ಕಲ್ಲು ಹೃದಯ ಕರಗಲಿಲ್ಲ. ಆತ್ಮಹತ್ಯೆಗೂ ಮುನ್ನ ಸಮಿವುಲ್ಲಾ ತನ್ನ ಪತ್ನಿಯ ನಡೆಯ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

About The Author

You May Also Like

More From Author

+ There are no comments

Add yours