ಮಳೆಗೆ 4ನೇ ಬಲಿ; ಹಳ್ಳ ದಾಟುವಾಗ ಕೊಚ್ಚಿಹೋಗಿ ಶಿಕ್ಷಕ ಸಾವು

1 min read

Tumkurnews
ತುಮಕೂರು; ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಶಿಕ್ಷಕನೋರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಆಟೋ ಚಾಲಕ ಅಮ್ಜದ್ ಮೃತ ದೇಹ ಪತ್ತೆ; ಮೂರು ಬಗೆಯ ಪರಿಹಾರ ಘೋಷಣೆ
ಶಿರಾ ತಾಲ್ಲೂಕು ಚನ್ನನಕುಂಟೆ ಬಳಿ ಘಟನೆ ಸಂಭವಿಸಿದ್ದು, ಆರೀಫ್ ಉಲ್ಲಾ(54) ಮೃತ ದುರ್ದೈವಿ. ಸದರಿ ಶಿಕ್ಷಕ ದಾವುದ್ ಪಾಳ್ಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಜೆ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಅವಘಡ ಸಂಭವಿಸಿದೆ.

ಮಳೆ ಆರ್ಭಟಕ್ಕೆ ತುಮಕೂರಿನಲ್ಲಿ ಮತ್ತೊಂದು ಬಲಿ; ಪಾಲಿಕೆ ವಿರುದ್ಧ ಜನಾಕ್ರೋಶ
ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚನ್ನನಕುಂಟೆ ಹಳ್ಳ ತುಂಬಿ ಹರಿಯುತ್ತಿದೆ. ಶಿಕ್ಷಕ ಆರೀಫ್ ಅವರು, ನೀರಿನ ರಭಸವನ್ನು ಲೆಕ್ಕಿಸದೇ ಬೈಕ್ ನಲ್ಲಿ ಹಳ್ಳ ದಾಟಲು ಮುಂದಾಗಿದ್ದಾರೆ. ನೀರಿನ ರಭಸಕ್ಕೆ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಶವವನ್ನು ಹೊರ ತೆಗೆದಿದೆ.

ಮಳೆ ಅವಾಂತರ; ವಿದ್ಯುತ್ ಸ್ಪರ್ಶಿಸಿ ಪಾವಗಡದ ವಾಟರ್ ಮ್ಯಾನ್ ಸಾವು

About The Author

You May Also Like

More From Author

+ There are no comments

Add yours