ಒಂದೇ ಮಳೆಗೆ ತುಮಕೂರಿನಲ್ಲಿ 48 ಮನೆಗಳಿಗೆ ಹಾನಿ; ವಿಪತ್ತು ನಿರ್ವಹಣೆಗೆ ತಂಡ ರಚನೆ

1 min read

 

Tumkurnews
ತುಮಕೂರು; ಶನಿವಾರ ಸುರಿದ ಭಾರಿ ಮಳೆಗೆ ನಗರದಲ್ಲಿ 48 ಮನೆಗಳಿಗೆ ಹಾನಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಗುರುತಿಸಿದ್ದಾರೆ.
ನಗರದಲ್ಲಿ ಮಳೆ ಆರ್ಭಟಕ್ಕೆ ಅಕ್ಷರಶಃ ಜನರು‌ ನಲುಗಿ ಹೋಗಿದ್ದು, ಮನೆಗಳಿಗೆ ನೀರು ನುಗ್ಗಿ ಇನ್ನಿಲ್ಲದ ಅವಾಂತರ ಸೃಷ್ಟಿಸಿದೆ. ಇಲ್ಲಿನ ನಜರಾಬಾದ್, ಸದಾಶಿವನಗರ, ಶಿವಮೂಕಾಂಬಿಕ ನಗರ, ಶಿರಾಗೇಟ್ ಸೇರಿದಂತೆ ವಿವಿಧೆಡೆ ಭಾನುವಾರ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದು, 48 ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿರುವುದನ್ನು ಗುರುತಿಸಿದ್ದಾರೆ‌.

ಮಳೆ ಆರ್ಭಟಕ್ಕೆ ತುಮಕೂರಿನಲ್ಲಿ ಮತ್ತೊಂದು ಬಲಿ; ಪಾಲಿಕೆ ವಿರುದ್ಧ ಜನಾಕ್ರೋಶ
ತಂಡ ರಚನೆ; ನಗರದಲ್ಲಿ ಮಳೆ ಅವಾಂತರಕ್ಕೆ ಎರಡು ಜೀವಗಳು ಬಲಿಯಾದ ಬಳಿಕ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಮಳೆ ಅನಾಹುತಗಳನ್ನು ಎದುರಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸಲು ವಿಪತ್ತು ನಿರ್ವಹಣಾ ಪಡೆಯ ಇಬ್ಬರು ನೋಡೆಲ್ ಅಧಿಕಾರಿಗಳ ತಂಡವನ್ನು ಪಾಲಿಕೆ ಆಯುಕ್ತರು ರಚನೆ ಮಾಡಿದ್ದಾರೆ.
ಅದರಂತೆ ವಾರ್ಡ್ 1ರಿಂದ 17ರ ವರೆಗೆ ವಿನಯ್ ಬಿ.ಜಿ (ಕಾರ್ಯಪಾಲಕ ಅಭಿಯಂತರರು) ಮೊ.9686687370 ಹಾಗೂ ವಾರ್ಡ್ 18ರಿಂದ 35ರ ವರೆಗೆ ಆಶಾ ಬಿ.ಕೆ(ಕಾರ್ಯಪಾಲಕ ಅಭಿಯಂತರರು), ಮೊ; 9731124750 ಇವರನ್ನು ನೇಮಕ ಮಾಡಲಾಗಿದ್ದು, ವಾರದ ಎಲ್ಲಾ ದಿನಗಳಲ್ಲಿ 24/7 ಸನ್ನದರಾಗಿದ್ದು, ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

ತುಮಕೂರಿಗೆ ಕೇಂದ್ರದ ಮತ್ತೊಂದು‌ ಕೊಡುಗೆ; 100 ಹಾಸಿಗೆಗಳ ESIC ಆಸ್ಪತ್ರೆ ಮಂಜೂರು

About The Author

You May Also Like

More From Author

+ There are no comments

Add yours