ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ರಾಜೀನಾಮೆ

1 min read

 

Tumkurnews
ತುಮಕೂರು; ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರೈತ ಮೋರ್ಚಾ ತುಮಕೂರು ಜಿಲ್ಲಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಬರೆದಿರುವ ಅವರು ಪ್ರವೀಣ್ ನೆಟ್ಯಾರ್ ಹತ್ಯೆ ಖಂಡಿಸಿ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಹಾಗೂ ತಮಗಾದ ನೋವಿನ ಬಗ್ಗೆ ಸುಧೀರ್ಘ ಪತ್ರ ಬರೆದಿದ್ದಾರೆ.

ತುಮಕೂರಿಗೆ ಕೇಂದ್ರದ ಮತ್ತೊಂದು‌ ಕೊಡುಗೆ; 100 ಹಾಸಿಗೆಗಳ ESIC ಆಸ್ಪತ್ರೆ ಮಂಜೂರು
ಪತ್ರದ ವಿವರ; ‘ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಹಿಂದೂಪರ ಕಾರ್ಯಕರ್ತರನ್ನು ಹಾಗೂ ತನ್ನ ಸ್ವಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗದೆ ಇರುವುದು ದುರದಷ್ಟಕರ ಸಂಗತಿ. ಪ್ರತಿ ಬಾರಿಯೂ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆಯಾದಾಗ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಭರವಸೆ ನೀಡುತ್ತಿದ್ದು ಆದರೆ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಭರವಸೆ ಭರವಸೆಯಾಗಿ ಉಳಿದಿದೆ’ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

KSRTC ನಿಲ್ದಾಣದಲ್ಲಿ ನಿಲ್ಲದ ಕಳ್ಳರ ಹಾವಳಿ; ಇಂದು ಒಂದೇ ದಿನ 1.50 ಲಕ್ಷ ರೂ. ಪಿಕ್ ಪಾಕೆಟ್!
‘ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ ಅವರಂತಹ ಮಹಾನ್ ನಾಯಕರು ಕಟ್ಟಿದ ಪಕ್ಷಕ್ಕೆ ಅವಮಾನ ಮಾಡದೆ ಮುಂದಾದರು ಹಿಂದುಗಳನ್ನು ಮತ್ತು ನಿಮ್ಮ ಸ್ವ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಂಡು ಹತ್ಯೆ ಮಾಡುವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ, ನಾನು ನನ್ನ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದು, ನನ್ನ ರಾಜೀನಾಮೆಯನ್ನು ಅಂಗೀಕರಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

(ಚಿತ್ರ; ಹಾಲೇಗೌಡ)

ಆಗಸ್ಟ್ 11ರಿಂದ 17ರವರೆಗೆ ದೇಶದ ಪ್ರತಿ‌ ಮನೆಯಲ್ಲೂ ರಾಷ್ಟ್ರದ್ವಜಾರೋಹಣಕ್ಕೆ ಕೇಂದ್ರ ಕರೆ; ಜಿಲ್ಲೆಯಲ್ಲಿ ಸಿದ್ಧತೆ ಆರಂಭ

About The Author

You May Also Like

More From Author

+ There are no comments

Add yours