Tumkurnews
ತುಮಕೂರು; ಮಳೆ ನೀರಿನಲ್ಲಿ ಕೊಚ್ಚಿ ಹೋದ ಆಟೋ ಚಾಲಕನ ಪತ್ತೆಗೆ ಭಾನುವಾರ ಎನ್.ಡಿ.ಆರ್.ಎಫ್ ( National Disaster Response Force) ತಂಡ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಶನಿವಾರ ಸಂಜೆ ನಗರದ ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿ ಮಳೆ ನೀರಿನ ಫೋಟೋ ತೆಗೆಯುತ್ತಿದ್ದ ಆಟೋ ಚಾಲಕ ಅಮ್ಜದ್ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದನು. ಬಳಿಕ ಆತನ ಪತ್ತೆಗೆ ಸ್ಥಳೀಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರಾದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಾಚರಣೆಗೆ ಎನ್.ಡಿ.ಆರ್.ಎಫ್ ತಂಡದ ಮೊರೆ ಹೋಗಲಾಗಿದೆ.
ಕಾಲುವೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ; ಮಳೆ ಫೋಟೋ ತೆಗೆಯುವಾಗ ಘಟನೆ
6 ಗಂಟೆಗೆ ಆರಂಭ; ಭಾನುವಾರ ಬೆಳಗ್ಗೆ 6 ಗಂಟೆಗೆ ಅಮ್ಜದ್ ಪತ್ತೆ ಕಾರ್ಯಾಚರಣೆಯನ್ನು ಎನ್.ಡಿ.ಆರ್.ಎಫ್ ತಂಡ ಆರಂಭಿಸಿದೆ. ಬೆಂಗಳೂರಿನಿಂದ ಬಂದಿರುವ ತಂಡದಿಂದ ರಿಂಗ್ ರಸ್ತೆಯ ರಾಜಕಾಲುವೆಯಲ್ಲಿ ಹುಡುಕಾಟ ನಡೆದಿದೆ. ಆದರೆ ಈವರೆಗೆ ಅಮ್ಜದ್ ಪತ್ತೆಯಾಗಿಲ್ಲ.
ಸ್ಥಳದಲ್ಲೇ ಮೊಕ್ಕಾಂ; ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಮ್ಜದ್ ಪತ್ನಿ ಹಾಗೂ ಕುಟುಂಬ ಸದಸ್ಯರು ಕೂಡ ಕಾರ್ಯಾಚರಣೆ ಸ್ಥಳದಲ್ಲಿ ಹಾಜರಿದ್ದಾರೆ.
+ There are no comments
Add yours