ಕಸದ ವಾಹನದಲ್ಲಿ ಕೆಂಪೇಗೌಡರ ಮೆರವಣಿಗೆ; ಮಹಾಬಲೇಶ್ವರ ಕ್ಷಮೆ

1 min read

Tumkur News
ಕುಣಿಗಲ್: ಕೆಂಪೇಗೌಡ ಅವರ ಜಯಂತೋತ್ಸವ ಮೆರವಣಿಗೆ ಸಮಯಯಲ್ಲಿ ಆದ ಘಟನೆಗೆ  ಸಂಬಂಧಿಸಿದಂತೆ ತಹಶೀಲ್ದಾರ್, ನಾಡ ಹಬ್ಬಗಳ ಸಮಿತಿಯ ಅಧ್ಯಕ್ಷ ಮಹಬಲೇಶ್ವರ ಬೇಷರತ್ ಕ್ಷಮೆಯಾಚಿಸಿದರು.

ಈಜಲು ಹೋಗಿ ವ್ಯಕ್ತಿ ಸಾವು

ನ್ಯಾಯಾಲಯದ ಅವರಣದಲ್ಲಿ ವಿವಿಧ ಸಮುದಾಯದ ಮುಖಂಡರ ಸಭೆ ಕರೆದು ಅಂದು ನಡೆದ ಘಟನೆಗೆ ಕಾರಣ ಕೇಳಿ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್  ನೀಡಲಾಗಿದೆ ಎಂದು ತಿಳಿಸಿದರು.

ಅನುಮಾನಸ್ಪದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಲೋಪದೋಷಕ್ಕೆ ಕಾರಣರಾದವರನ್ನು ತಿಳಿಸುವಂತೆ ಮುಖಂಡರು ತಹಶೀಲ್ದಾರ್ ಅವರನ್ನು ಆಗ್ರಪಡಿಸಿದರು. ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಆದರೆ ಅದೇ ದಿನ ಎಡಿಯೂರಿಗೆ ಮುಖ್ಯಮಂತ್ರಿಗಳು ಬಂದ ಕಾರಣ ಪೂರ್ವ ಭಾವಿ ಸಭೆಯಲ್ಲಿ ನಾನು ಇರಲಿಲ್ಲ, ಆಚರಣೆ ಸಂಬಂಧ ಒಂದೊಂದು ಇಲಾಖೆಗೆ ಒಂದೊಂದು ಕಾರ್ಯಕ್ರಮವನ್ನು ವಹಿಸಲಾಗಿತ್ತು. ಮೆರವಣಿಗೆಗೆ ವಾಹನ ಹಾಗೂ ಡೊಳ್ಳುಕುಣಿತ ಪುರಸಭಾ ಅಧ್ಯಕ್ಷರು ವಹಿಸಿಕೊಂಡಿದ್ದರು. ಪುರಸಭೆಯ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಪ್ಲೆಕ್ಸ್  ಕಟ್ಟಲಾಗಿದೆ ಎಂದು ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಕಸದ ವಾಹನದಲ್ಲಿ ಅಳವಡಿಸಿದ ಪ್ಲೆಕ್ಸ್ ನ್ನು ತೆಗಿಸಿ ಬೇರೆ ವಾಹನದಲ್ಲಿ ಪ್ಲೆಕ್ಸ್ ಹಾಕಿಸಿ ಮೆರವಣಿಗೆ ಮಾಡಲಾಯಿತು. ಕಸದ ವಾಹನದಲ್ಲಿ  ಮಾಡಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

About The Author

You May Also Like

More From Author

+ There are no comments

Add yours