ಕಾರು – ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸಾವು

1 min read

 

Tumkur News
ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಣಿಗಲ್ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಯ ಗವಿಮಠ ಬಳಿ ನಡೆದಿದೆ.

ಕಾಲುಜಾರಿ ಬಾವಿಗೆ ಬಿದ್ದು ಮಹಿಳೆ ಸಾವು

ಕುಣಿಗಲ್ ಕಡೆಯಿಂದ ಹಳೇವೂರು ಕಡೆಗೆ ಹೊಗುತ್ತಿದ್ದ ಬೈಕ್ ಮತ್ತು ಮದ್ದೂರು ಕಡೆಯಿಂದ ಕುಣಿಗಲ್ ಕಡೆ ಬರುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದ್ದು, ಹುಲಿಯೂರುದುರ್ಗ ಹೋಬಳಿಯ ಹಳೇವೂರು ಮೂಲದ ಮಹದೇವ್ (29) ಎಂಬುವವರು ಮೃತಪಟ್ಟಿದ್ದಾರೆ.

3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!

ಸೋಲೂರಿನ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕ ನಾಗಿ ಕಾರ್ಯನಿರ್ವಹಿಸುತ್ತಿದ್ದ ಮಹದೇವ್ ಎಂದು ತಿಳಿದುಬಂದಿದೆ. ಸ್ಥಳಕ್ಕೆ‌ ಕುಣಿಗಲ್ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸಿದರು. ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You May Also Like

More From Author

+ There are no comments

Add yours