ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!

1 min read

Tumkur News
ಗುಬ್ಬಿ: ಆತ್ಮಸಾಕ್ಷಿ ಎಂಬುವುದು ಶಾಸಕರಲ್ಲಿ ಇದ್ದರೆ ಈ ಕೂಡಲೇ ಪಕ್ಷದ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಒತ್ತಾಯಿಸಿದರು.

ಕಡಿಮೆ‌ ಅಂಕ ಪಡೆದಿದ್ದ ಯುವಕ ಮನನೊಂದು ಆತ್ಮಹತ್ಯೆ!

ಪಟ್ಟಣದ ಜೆಡಿಎಸ್ ಕಛೇರಿಯಿಂದ ನೂರಾರು ಕಾರ್ಯಕರ್ತರೊಡನೆ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ದ ಘೋಷಣೆಗಳನ್ನು ಕೂಗುತ್ತಾ  ರಸ್ತೆ ತಡೆ ನಡೆಯಿಸಿ ಮಾತನಾಡಿದ ಅವರು, ಕಳೆದ ಸುಮಾರು ೨೦ ವರ್ಷಗಳಿಂದ ಗುಬ್ಬಿ ತಾಲ್ಲೂಕಿನ ಮತದಾರರ ಕಣ್ಣಿಗೆ ಮಣ್ಣು ಎರಚಿ ಮತಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿದ ಖ್ಯಾತಿ ಈ ಶಾಸಕರದ್ದಾಗಿದೆ. ತಾಲೂಕಿನ ಜನತೆಯನ್ನು ಮೂರ್ಖರನ್ನಾಗಿ ಮಾಡಿ ಯಾವುದೇ ಗುರುತಿಸುವಂತಹ ಕೆಲಸವನ್ನು ಈ ತಾಲ್ಲೂಕಿನಲ್ಲಿ ನಡೆಯದೇ ಇರುವುದು ಈ ತಾಲ್ಲೂಕಿನ ಮತದಾರರ ದೌಭಾಗ್ಯ ಎಂದರು.

ಕುಮಾರಸ್ವಾಮಿಗೆ‌ ಪಕ್ಷ ನಡೆಸುವ ಯೊಗ್ಯತೆ ಇಲ್ಲ: ಎಸ್.ಆರ್. ಶ್ರೀನಿವಾಸ್

ಪಕ್ಷಕ್ಕೆ ದ್ರೋಹವೆಸಗಿ ಬೇರೆ ಪಕ್ಷಕ್ಕೆ ಮತನೀಡಿ, ತಾನು ನಿಷ್ಟಾವಂತ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದಕ್ಕೆ ಈ ತಾಲ್ಲೂಕಿನ ಜನರೇನು ದಡ್ಡರೇನು ಅಲ್ಲ. ಪಕ್ಷಕ್ಕೆ ದ್ರೋಹವೆಸಗಿದ ಇಂತಹ ವ್ಯಕ್ತಿಯನ್ನು ಗುಬ್ಬಿ ತಾಲ್ಲೂಕಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರುಗಳು ಕ್ಷಮಿಸುವುದಿಲ್ಲ. ಜೆಡಿಎಸ್ ಪಕ್ಷದ ಸದಸ್ಯನಾಗಿ ಹಾಗೂ ನಾಲ್ಕು ಬಾರಿ ಶಾಸಕನಾಗಿ ಪಕ್ಷದ ಎಲ್ಲಾ ಸೌಲಭ್ಯಗಳನ್ನು ಪಡೆದು ಪಕ್ಷಕ್ಕೆ ದ್ರೋಹವೆಸಗಿದ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡಲೇ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕಿಡಿಕಾರಿದರು.

ಅವನೇನು‌ ಕತ್ತೆ ಕಾಯುತಿದ್ನಾ?; ಎಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ತರಾಟೆ

ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ ಮಾತನಾಡಿ, ಅವರು ಪ್ರತಿ ಬಾರಿಯೂ ಗೆಲುವನ್ನು ತಂದು ಕೊಟ್ಟಂತಹ ಮಾತೃ ಪಕ್ಷಕ್ಕೆ ದ್ರೋಹವೆಸಗಿದ ಶಾಸಕ ರಾಜಿನಾಮೆ ನೀಡಬೇಕು.  ತಾಲ್ಲೂಕಿನ ಮತದಾರರಲ್ಲಿ ಪೊಳ್ಳು ಭರವಸೆಗಳನ್ನು ನೀಡಿ, ತನ್ನ ಶಾಸಕ ಸ್ಥಾನವನ್ನು ಉಳಿಸಿಕೊಂಡಿರುವ ಶಾಸಕನನ್ನು ಈ ಬಾರಿ ಬರುವಂತಹ ಚುನಾವಣೆಯಲ್ಲಿ ಮತದಾರ ಪ್ರಭುವು ಇವರನ್ನು ಧಿಕ್ಕರಿಸುತ್ತಾರೆ ಎಂದು ಹೇಳಿದರು.

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಇದೇ ಸಂದರ್ಭದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್‌ರವರ ಪ್ರತಿಕೃತಿಯನ್ನು ಬೆಂಕಿ ಹಚ್ಚಿ ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ, ಶಿವಲಿಂಗಯ್ಯ, ಪಿರ್ದೋಷ್ ಅಲಿ, ರಘು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಜಗದೀಶ್, ಚಿಕ್ಕವೀರಪ್ಪ, ಕೋಡ್ಲಿ ಲೋಕೇಶ್, ಹಾಗೂ ನೂರಾರು ಕಾರ್ಯಕರ್ತರು ಹಾಗೂ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours