ಬಿಎಂಟಿಸಿ ಬಸ್ ದರ ಹೆಚ್ಚಳ ಸಾಧ್ಯತೆ!

1 min read

Tumkur News
ಬೆಂಗಳೂರು: ಬಿಎಂಟಿಸಿ ಬಸ್​ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪೆಟ್ರೋಲ್​ ಡಿಸೇಲ್ ದರ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ.

KGF2 ದಾಖಲೆ ಹಿಂದಿಕ್ಕಲಿದೆಯೇ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರ!?

ಇಂಧನ ಬೆಲೆ, ಹೋಟೆಲ್​ ತಿಂಡಿ, ಔಷಧಿಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬಸ್​ ಪ್ರಯಾಣಿಕರಿಗೆ ಟಿಕೆಟ್​ ಬೆಲೆ ಏರಿಕೆ ಶಾಕ್​ ಕೊಡಲು ರಾಜ್ಯ ಸರ್ಕಾರ  ಮುಂದಾಗಿದೆ.  ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. 2 ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಬಾರಿ ಶೇ.20ರಷ್ಟು ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

About The Author

You May Also Like

More From Author

+ There are no comments

Add yours