ಅಲ್ಪಸಂಖ್ಯಾತರ ವರ್ಗದವರಿಂದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

1 min read

Tumkur News
ತುಮಕೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಕಲ್ಪಿಸಲು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಮುಸಲ್ಮಾನರು, ಕ್ರೈಸ್ತರು, ಜೈನರು, ಸಿಖ್ಖರು, ಬೌದ್ದರು ಮತ್ತು ಪಾರ್ಷಿ ಜನಾಂಗದವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಸಿಐಎಲ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿ ತುಮಕೂರು ಜಿಲ್ಲೆಯ ವ್ಯಾಪ್ತಿಯೊಳಗೆ ವಾಸವಾಗಿರಬೇಕು. ಸರ್ಕಾರವು ಅಂಗೀಕರಿಸಿದ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-1, ಪ್ರವರ್ಗ-2ಬಿ ಮತ್ತು 3ಬಿ ಗುಂಪಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದಲ್ಲಿ ವಾಸಮಾಡುವವರಿಗೆ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡುವವರಿಗೆ ರೂ. 1,03,000/- (ಅರಿವು ಯೋಜನೆಯಲ್ಲಿ ರೂ.8ಲಕ್ಷಗಳು) ಮೀರಬಾರದು. 18 ರಿಂದ 55 ವರ್ಷದೊಳಗಿನವರಾಗಿದ್ದು, ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರಬೇಕು ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿರಬೇಕು. ಅರ್ಜಿದಾರರು ತಮ್ಮ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಪ್ರತಿಯನ್ನು ಸಲ್ಲಿಸಬೇಕು.

ರೈಲ್ವೆ ಇಲಾಖೆಯಲ್ಲಿ 3ಸಾವಿರಕ್ಕೂ‌ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶ್ರಮಶಕ್ತಿ ಯೋಜನೆ: ಮತೀಯ ಅಲ್ಪಸಂಖ್ಯಾತ ಸಮುದಾಯದ ಸಾಂಪ್ರದಾಯಿಕ ಕುಶಲ ಕರ್ಮಿಗಳು ಮತ್ತು ವೃತ್ತಿ ಕುಲ ಕಸುಬುದಾರರು ಆಧುನಿಕ ತಂತ್ರಜ್ಞಾನ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಮತ್ತು ವೃತ್ತಿ ಕೌಶಲ್ಯತೆ ಅಭಿವೃದ್ದಿ ಪಡಿಸಿಕೊಳ್ಳಲು ಹಾಗೂ ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಶ್ರಮಶಕ್ತಿ ಯೋಜನೆಯಡಿಯಲ್ಲಿ ಗರಿಷ್ಟ ರೂ. 50,000/- ಶೇ. 4ರ ಬಡ್ಡಿ ಧರದಲ್ಲಿ ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ ಇತರೆ ಆರ್ಥಿಕ ಚಟುವಟಿಕೆಗಳ ಘಟಕ ವೆಚ್ಚಕ್ಕೆ ರೂ,25,000/- ಗಳ ಆರ್ಥಿಕ ನೆರವು ನೀಡಲಾಗುವುದು. ಸದರಿ ಮೊತ್ತದಲ್ಲಿ ಶೇ.50 ಅವಧಿ ಸಾಲ ಮತ್ತು ಉಳಿದ ಶೇ. 50 ಸಾಲವನ್ನು ಬ್ಯಾಕ್ ಎಂಡ್ ಸಹಾಯಧನವಾಗಿ ಪರಿಗಣಿಸಲಾಗುವುದು.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ; ಅರ್ಜಿ‌‌ ಆಹ್ವಾನ

ಟ್ಯಾಕ್ಸಿ/ಗೂಡ್ಸ್/ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿಗಾಗಿ ಸಹಾಯಧನ ಯೋಜನೆ: ಆರ್ಥಿಕವಾಗಿ ಹಿಂದುಳಿದ ಮತೀಯ ಅಲ್ಪಸಂಖ್ಯಾತ ಸಮುದಾಯದವರು ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಲು ಸಾದ್ಯವಾಗದೇ ವಾಹನ ಚಾಲಕರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಆರ್ಥಿಕ ಸ್ಥತಿಯನ್ನು ಉತ್ತಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಸಲು ರೂ. 2,50,000/-ಗಳ ಮತ್ತು ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಲು ರೂ. 75,000/-ಗಳ ಸಹಾಯಧನವನ್ನು ನೀಡಲಾಗುವುದು ಹಾಗೂ ಉಳಿದ ಮೊತ್ತ ಬ್ಯಾಂಕ್‍ಗಳಿಂದ ಚಾಲ್ತಿ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

ಸ್ವಯಂ ಉದ್ಯೋಗ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದವುಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಕೃತ / ಷೆಡ್ಯೂಲ್ ಬ್ಯಾಂಕುಗಳ ಸಹಾಯೋಗದೊಂದಿಗೆ ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚದ ಶೇ. 33 ಅಥವಾ ಗರಿಷ್ಠ ಮಿತಿ ರೂ. 1.00 ಲಕ್ಷದ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಧಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶ್ರೀ ಸಿದ್ದಲಿಂಗೇಶ್ವರ ನಿಲಯ, ಕೆ.ಎಸ್.ಎಫ್.ಸಿ. ಎದುರು ರಸ್ತೆ, 8ನೇ ಕ್ರಾಸ್, ಕೃಷ್ಣಾನಗರ, ತುಮಕೂರು. ಇಲ್ಲಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0816-2281023ನ್ನು ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours