ಕೋವಿಡ್ 19ಗೆ ತುಮಕೂರು, ನಿಟ್ಟೂರಿನಲ್ಲಿ ಎರಡು ಸಾವು, ಇಂದು 37 ಪಾಸಿಟಿವ್.

1 min read

ತುಮಕೂರು ನ್ಯೂಸ್. ಇನ್
Tumkurnews.in

ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 37 ಕೋವಿಡ್ 19 ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 813ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
*
ಸೋಂಕಿತರ ತಾಲೂಕುವಾರು ವಿವರ
ತುಮಕೂರು- 20
ಗುಬ್ಬಿ- 3
ಕುಣಿಗಲ್- 2
ಮಧುಗಿರಿ- 1
ಪಾವಗಡ- 3
ಶಿರಾ- 6
ತಿಪಟೂರು- 2
ಒಟ್ಟು- 37
ಚಿಕ್ಕನಾಯಕನಹಳ್ಳಿ, ಕೊರಟಗೆರೆ, ತುರುವೇಕೆರೆ ತಾಲ್ಲೂಕಿನಲ್ಲಿ ಹೊಸ ಪ್ರಕರಣಗಳು ಕಂಡು ಬಂದಿಲ್ಲ.
ಇಂದು 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 348 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
*
ಇಬ್ಬರು ‌ಸಾವು:
ತುಮಕೂರು ನಗರ, ಬನಶಂಕರಿ ಬಡಾವಣೆಯ 76 ವರ್ಷ ವಯಸ್ಸಿನ ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ 52 ವರ್ಷದ ಪುರುಷ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.

About The Author

You May Also Like

More From Author

+ There are no comments

Add yours