ಕೈಮಗ್ಗ ನೇಕಾರರು ಜೂ.20ರೊಳಗೆ ಅರ್ಜಿ ಸಲ್ಲಿಸಿ

1 min read

ತುಮಕೂರು ನ್ಯೂಸ್.ಇನ್, ಜೂ.16:

ಕೋವಿಡ್ 19 ಪ್ರಯುಕ್ತ ಸಂಕಷ್ಟದಲ್ಲಿರುವ ನೇಕಾರರಿಗೆ ನೇಕಾರರ ಸಮ್ಮಾನ್ ಯೋಜನೆಯನ್ನು ಘೋಷಿಸುವ ಮೂಲಕ 2000 ರೂ.ಗಳ ಆರ್ಥಿಕ ನೆರವನ್ನು ನೇರವಾಗಿ ನೇಕಾರರ ಖಾತೆಗಳಿಗೆ ಜಮೆ ಮಾಡಲು ಸರ್ಕಾರ ಆದೇಶಿಸಿದೆ.
ಜಿಲ್ಲೆಯ ಎಲ್ಲಾ ಕೈಮಗ್ಗ ನೇಕಾರರು ಈ ಯೋಜನೆಯ ಆರ್ಥಿಕ ನೆರವನ್ನು ಪಡೆಯಲು 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯಲ್ಲಿ ನೊಂದಾಯಿಸಿರುವ ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿರುವ ನೇಕಾರರು ಹಾಗೂ ಇತರೆ ಕೈಮಗ್ಗ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಸೇವಾ ಸಿಂಧು ಆನ್‍ಲೈನ್ ಫೋರ್ಟಲ್ ಮೂಲಕ ಜೂನ್ 20ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ, ಜಿಲ್ಲಾ ಪಂಚಾಯತ್, ತುಮಕೂರು ಅಥವಾ ದೂರವಾಣಿ ಸಂಖ್ಯೆ: 0816-2275370ಅನ್ನು ಸಂಪರ್ಕಿಸಬೇಕೆಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours