ತುಮಕೂರು: ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ನಾಪತ್ತೆ

1 min read

 

 

 

 

 

ತಿಲಕ್ ಪಾರ್ಕ್ ಪೊಲೀಸ್ ಠಾಣೆ: 2 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲು

Tumkurnews
ತುಮಕೂರು: ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಪ್ರಕರಣ-1: ತುಮಕೂರು ಟೌನ್ ಮೆಳೆಕೋಟೆ ಮುಖ್ಯರಸ್ತೆಯಲ್ಲಿರುವ ಗೋಕುಲ್ ಮೆಡಿಕಲ್ಸ್ ಹತ್ತಿರ ವಾಸವಾಗಿದ್ದ ಸುಮಾರು 62 ವರ್ಷದ ಲಕ್ಷ್ಮಿನಾರಾಯಣಮೂರ್ತಿ ಎಂಬ ವ್ಯಕ್ತಿಯು ಫೆಬ್ರವರಿ 17 ರಿಂದ ಕಾಣೆಯಾಗಿದ್ದಾನೆ. ಈತನು 5.5 ಅಡಿ ಎತ್ತರ, ದುಂಡು ಮುಖ, ದೃಢಕಾಯ ಶರೀರ, ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಕ್ರೀಂ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.
ಪ್ರಕರಣ-2 : ತುಮಕೂರು ಟೌನ್ ಮೆಳೆಕೋಟೆ ಟೂಡಾ ಲೇಔಟ್‍ನಲ್ಲಿ ವಾಸವಾಗಿದ್ದ ಸುಮಾರು 37 ವರ್ಷದ ಎ.ಎನ್.ಪ್ರವೀಣ್ ಕುಮಾರ್ ಎಂಬ ವ್ಯಕ್ತಿಯು ಮಾರ್ಚ್ 14 ರಿಂದ ಕಾಣೆಯಾಗಿದ್ದಾನೆ. ಈತನು 5.7 ಅಡಿ ಎತ್ತರ, ಕೋಲುಮುಖ, ದೃಢಕಾಯ ಶರೀರ, ಗೋಧಿ ಮೈಬಣ್ಣ, ಈತನು ಮನೋರೋಗಿಯಾಗಿ ಬಳಲುತ್ತಿರುತ್ತಾರೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡಲು ಬರುತ್ತದೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಅಂಗಿ, ಕಂದು ಬಣ್ಣದ ಪ್ಯಾಂಟ್ ಧರಸಿದ್ದನು.
ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. 0816-2278202/ 2278424/ 2272340, 2278000, ಮೊ.ಸಂ.9480802981-32-20ಯನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

You May Also Like

More From Author

+ There are no comments

Add yours